ರಾಷ್ಟ್ರೀಯ

ನಕ್ಸಲರಿಗೂ ತಟ್ಟಿದ ನೋಟ್ ಬ್ಯಾನ್ ಬಿಸಿ

Pinterest LinkedIn Tumblr

1-Naxalನವದೆಹಲಿ: 500 ಹಾಗು 1000 ರೂಪಾಯಿ ನೋಟಿನ ಮೇಲಿನ ನಿಷೇಧ ನಕ್ಸಲರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಕರೆನ್ಸಿ ಮೇಲಿನ ಸರ್ಜಿಕಲ್ ಸ್ಟ್ರೈಕ್ ಅತ್ಯಂತ ಪರಿಣಾಮಕಾರಿ ಅಪರೇಷನ್ ಎಂದು ಕೇಂದ್ರ ಗುಪ್ತಚರ ಹಾಗೂ ಪೊಲೀಸ್ ಮೂಲಗಳು ತಿಳಿಸಿವೆ.

ನಕ್ಸಲ್ ಬಲ ಹೆಚ್ಚಾಗಿರುವ ಛತ್ತೀಸ್‍ಘಡ, ಜಾರ್ಖಂಡ್ ಹಾಗೂ ಒರಿಸ್ಸಾ ರಾಜ್ಯಗಳಲ್ಲಿ ಈವರೆಗೆ ನಡೆಸಲಾಗಿರುವ ಯಾವುದೇ ಕೂಬಿಂಗ್ ಕಾರ್ಯಾಚರಣೆಗಿಂತಲೂ ನೋಟ್ ಬ್ಯಾನ್ ಆದೇಶ ನಕ್ಸಲರನ್ನು ಕಂಗೆಡಿಸಿದೆ ಅನ್ನೋ ಮಾಹಿತಿಯಿದೆ. ಯಾಕಂದ್ರೆ ವಿವಿಧ ಮೂಲಗಳಿಂದ ಸಂಗ್ರಹಿಸಿರುವ ಹಣವನ್ನು ಬದಲಾಯಿಸಲೇಬೇಕಾದ ಅನಿವಾರ್ಯತೆಗೆ ನಕ್ಸಲರು ಸಿಲುಕಿದ್ದು, ತಮ್ಮ ಸುರಕ್ಷಿತ ಪ್ರದೇಶಗಳಿಂದ ನಗರಕ್ಕೆ ಬರುವುದು ಅನಿವಾರ್ಯ ಆಗಲಿದೆ.

ಈ ವೇಳೆ ಸೂಕ್ಷ್ಮವಾಗಿ ಕಾರ್ಯಾಚರಣೆ ನಡೆಸಿದ್ರೆ ನಕ್ಸಲರನ್ನು ಸೆರೆಹಿಡಿಯಬಹುದು ಎನ್ನುವುದು ಅಧಿಕಾರಿಗಳ ಲೆಕ್ಕಾಚಾರ. ಹೀಗಾಗಿ ನಕ್ಸಲರು ಅರಣ್ಯದಿಂದ ಹೊರಬರುವ ಹಾಗೂ ಅರಣ್ಯ ಪ್ರವೇಶಿಸುವ ಸೂಕ್ಷ್ಮ ಜಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Comments are closed.