ರಾಷ್ಟ್ರೀಯ

ನೋಟು ಸಮಸ್ಯೆ: ಒಂದು ತಿಂಗಳ ಕಾಲ ಜನರು ಕಷ್ಟ ಅನುಭವಿಸಬೇಕಾದೀತು-ರಾಜನಾಥ್ ಸಿಂಗ್

Pinterest LinkedIn Tumblr

rajanath-singhರೆವಾರಿ: ₹500 ಮತ್ತು ₹1000 ಮುಖಬೆಲೆಯ ನೋಟು ಚಲಾವಣೆ ರದ್ದು ಮಾಡಿರುವುದರಿಂದ ಜನರು ಸಮಸ್ಯೆ ಎದುರಿಸಬೇಕಾಗಿ ಬಂದಿದೆ. ದೇಶದಲ್ಲಿನ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಸ್ವಾತಂತ್ರ್ಯಕ್ಕಾಗಿ ಈ ನಿರ್ಧಾರ ಅಗತ್ಯವಾಗಿತ್ತು ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಬುಧವಾರ ರೆವಾರಿಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಂಗ್, ಉತ್ತಮ ಭವಿಷ್ಯಕ್ಕಾಗಿ ಜನರು ಈಗ ಸ್ವಲ್ಪ ಕಷ್ಟ ಪಡಬೇಕಾಗುತ್ತದೆ. ಇದೊಂದು ಚಿಕ್ಕ ನಿರ್ಧಾರವಾಗಿರಲಿಲ್ಲ. ಒಂದು ತಿಂಗಳುಗಳ ಕಾಲ ಜನರು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಮುಂಬರುವ ದಿನಗಳಲ್ಲಿ ಇದರಿಂದ ಲಾಭವಾಗುತ್ತದೆ. ಕೆಲವೊಂದು ರಾಜಕೀಯ ಪಕ್ಷಗಳು ನೋಟು ರದ್ದು ನಿರ್ಧಾರವನ್ನು ವಿರೋಧಿಸುತ್ತಿವೆ. ದಯವಿಟ್ಟು ಕೆಲವು ದಿನಗಳ ಕಾಲ ನಮ್ಮೊಂದಿಗೆ ಸಹಕರಿಸಿ. ನಾವು ನಿಮಗೆ ಉತ್ತಮ ಭವಿಷ್ಯ ಕಲ್ಪಿಸುತ್ತೇವೆ ಎಂದಿದ್ದಾರೆ.

ನಮ್ಮ ದೇಶ ರಾಜಕೀಯವಾಗಿ ಸ್ವತಂತ್ರಗೊಂಡಿದೆ. ಆದರೆ ನಾವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸ್ವತಂತ್ರರಾಗಬೇಕಿದೆ. ನಾವು ಆರ್ಥಿಕ ಅಸಮಾನತೆಯನ್ನು ಕೊನೆಗೊಳಿಸಬೇಕಾಗಿದೆ. ನೋಟು ರದ್ದು ನಿರ್ಧಾರವು ಇದಕ್ಕಾಗಿರುವ ಮೊದಲ ಹೆಜ್ಜೆಯಾಗಿದೆ. ಇದು ಭಾರತದ ರಾಜಕೀಯದಲ್ಲಿ ಪಾರದರ್ಶಕತೆಯನ್ನು ತರಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

Comments are closed.