ರಾಷ್ಟ್ರೀಯ

ಮೋದಿಗೆ ಲಾಲೂ ಕೇಳಿದ ಪ್ರಶ್ನೆ ವೈರಲ್!

Pinterest LinkedIn Tumblr

laluಪಾಟ್ನಾ(ನ.15): 70 ವರ್ಷಗಳ ಭ್ರಷ್ಟಚಾರವನ್ನು ಸ್ವಚ್ಛಗೊಳಿಸಲು 50 ದಿನವಾದರೂ ಬೇಡವೇ. ಕಪ್ಪುಹಣಕ್ಕೆ ಕಡಿವಾಣ ಹಾಕಲು ನನಗೆ 50 ದಿನಗಳ ಕಾಲಾವಕಾಶವನ್ನು ಕೊಡಿ ಎಂದು ಗೋವಾದಲ್ಲಿ ಪ್ರಧಾನಿ ಮೋದಿ ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್. ಮೋದಿಯವರೇ ನೀವು ನಿಗದಿತ 50 ದಿನಗಳ ಸಮಯವನ್ನು ಕೇಳುತ್ತಿದ್ದೀರಿ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯ ಖಾತೆಗೂ ರೂಪಾಯಿ15 ಲಕ್ಷ ಹಣವನ್ನು ಠೇವಣಿ ಮಾಡುತ್ತೇನೆಂದು ಈ ಹಿಂದೆ ಚುನಾವಣೆ ವೇಳೆಯಲ್ಲಿ ಭರವಸೆಯನ್ನು ನೀಡಿದ್ದೀರಿ. ಇದೀಗ 50 ದಿನಗಳ ಕಾಲಾವಕಾಶವನ್ನು ಕೇಳುತ್ತಿದ್ದೀರಿ. 50 ದಿನ ಕಳೆದ ಬಳಿಕ ಪ್ರತಿಯೊಬ್ಬ ಪ್ರಜೆಯ ಖಾತೆಗೆ 15 ಲಕ್ಷ ರೂಪಾಯಿ ಠೇವಣಿಯಾಗುತ್ತದೆಯೇ? ಎಂದು ಮೋದಿಗೆ ಲಾಲೂ ಪ್ರಶ್ನಿಸಿದ್ದಾರೆ.

Comments are closed.