ರಾಷ್ಟ್ರೀಯ

ಸರಕಾರದ ಮುಂದಿನ ಯೋಜನೆ ಬೇನಾಮಿ ಆಸ್ತಿಗಳಾ?

Pinterest LinkedIn Tumblr

modhiನವದೆಹಲಿ(ನ. 15): ಐನ್ನೂರು ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳನ್ನ ರದ್ದು ಮಾಡುವ ಸರಕಾರದ ಕ್ರಮ ದೇಶಾದ್ಯಂತ ಜನಜೀವನದ ಮೇಲೆ ಪರಿಣಾಮ ಬೀರಿದೆ. ಸರಕಾರದ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ. ಆದರೆ, ಸರಕಾರ ಇದೊಂದೇ ಕ್ರಮಕ್ಕೆ ಸೀಮಿತವಾಗುವಂತೆ ತೋರುತ್ತಿಲ್ಲ. ಇಂಥ ಇನ್ನೂ ಕೆಲವು ಮಹತ್ವದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಸರಕಾರ ಯೋಜಿಸಿದೆ. ಬೇನಾಮಿ ಆಸ್ತಿಗಳನ್ನು ಮಟ್ಟಹಾಕುವುದು ಸರಕಾರದ ಮುಂದಿನ ಗುರಿ ಆಗಿದೆ.
ಇನ್ನೆರಡು ಅಥವಾ ಮೂರು ತಿಂಗಳಲ್ಲಿ ಬೇನಾಮಿ(ನಕಲಿ ಹೆಸರು) ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ದೊಡ್ಡ ಯೋಜನೆಯನ್ನು ಸರಕಾರ ಹೊರತರಲಿದೆಯಂತೆ.
ಭಾರೀ ಮಟ್ಟದಲ್ಲಿ ಗ್ರಾಮೀಣ ಯೋಜನೆ:
ಗ್ರಾಮೀಣ ಭಾಗದ ಬಡ ಜನರನ್ನು ಸಶಕ್ತಗೊಳಿಸುವ ಬೃಹತ್ ಯೋಜನೆಯೊಂದನ್ನು ಆರಂಭಿಸಲು ಸರಕಾರ ಯೋಜಿಸಿರುವ ಮಾಹಿತಿ ಮಾಧ್ಯಮಗಳಿಗೆ ಲಭಿಸಿದೆ. ಮುಂದಿನ ವರ್ಷ, ಅಥವಾ 2018ರಲ್ಲಿ ಈ ಯೋಜನೆ ಕೈಗೂಡುವ ಸಾಧ್ಯತೆ ಇದೆ. ಇದರ ಜೊತೆಗೆ ಮೂಲಭೂತ ಸೌಕರ್ಯಕ್ಕೆ ಚೇತರಿಕೆ ನೀಡುವ ಯೋಜನೆಯೂ ಸರಕಾರದ ಟ್ಯಾಸ್ಕ್ ಲಿಸ್ಟ್’ನಲ್ಲಿದೆ ಎನ್ನಲಾಗಿದೆ.
ಇಟ್ಟ ಹೆಜ್ಜೆ ಹಿಂಸರಿಯದಿರಲು ನಿರ್ಧಾರ:
ನೋಟು ರದ್ದು ಮಾಡುವ ಸರಕಾರದ ಕ್ರಮಕ್ಕೆ ಕೆಲ ವಲಯಗಳಿಂಗ ಭಾರೀ ವಿರೋಧ ವ್ಯಕ್ತವಾಗಬಹುದೆಂದು ಸರಕಾರ ಮೊದಲೇ ಅಂದಾಜಿಸಿತ್ತು. ಆದರೆ, ಜನಸಾಮಾನ್ಯರು ಸರಕಾರದ ಪರವಾಗಿ ನಿಂತಿರುವುದರಿಂದ ಯಾವುದೇ ಕಾರಣಕ್ಕೂ ಈ ಮಹತ್ವದ ಕ್ರಮವನ್ನು ಹಿಂಪಡೆದುಕೊಳ್ಳಬಾರದೆಂದು ಸರಕಾರ ನಿರ್ಧರಿಸಿದೆ. ನಿನ್ನೆ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಈ ವಿಚಾರವನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

Comments are closed.