ನವದೆಹಲಿ (ನ.15): ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ಉದ್ದೇಶ ಕಪ್ಪು ಹಣವನ್ನು ತರುವುದಲ್ಲ ಬದಲಾಗಿ ಬ್ಯಾಂಕುಗಳಿಗೆ ಉದ್ಯಮಿಗಳಿಂದಾಗಿರುವ ನಷ್ಟವನ್ನು ತುಂಬಿಸುವುದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ನೋಟು ನಿಷೇಧ ಕ್ರಮದಿಂದ ಮಾರುಕಟ್ಟೆಯಲ್ಲಿರುವ ಸುಮಾರು 16,000 ಕೋಟಿ ರೂ.ಗಳ ಪೈಕಿ 10,000 ಕೋಟಿ ರೂ.ಗಳು ಬ್ಯಾಂಕುಗಳಲ್ಲಿ ಜಮೆಯಾಗಿಲಿದೆ. ಉಳಿದ 6000 ಕೋಟಿ ರೂ. ಹಣ ರಿಸರ್ವ್ ಬ್ಯಾಂಕ್ ಮೂಲಕ ಹೊಂದಿಸಲಾಗುತ್ತಿದೆ. ದೊಡ್ಡ ದೊಡ್ಡ ಉದ್ಯಮಿಗಳು ಬ್ಯಾಂಕುಗಳಿಗೆ ಬಾಕಿಯಿಟ್ಟಿರುವ ಮೊತ್ತವನ್ನು ಸರಿದೂಗಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.
ಈ ಮೂಲಕ ಸರ್ಕಾರವು ಸಾಮನ್ಯ ಜನರ ಹಣವನ್ನು ಬಳಸಿ ಶ್ರೀಮಂತ ಉದ್ಯಮಿಗಳನ್ನು ಬಚಾವು ಮಾಡಲು ಪ್ರಯತ್ನಿಸುತ್ತಿದೆ ಎಂದು ಸಿಬಲ್ ಹೇಳಿದ್ದಾರೆ.