ರಾಷ್ಟ್ರೀಯ

ಜಾಗತಿಕ ಆರ್ಥಿಕ ಹಿಂಜರಿತ ಪರಿಸ್ಥಿತಿಯಲ್ಲಿ ಕಪ್ಪುಹಣ ಭಾರತದ ಆರ್ಥಿಕತೆಗೆ ಸಹಾಯ ಮಾಡಿತ್ತು: ಅಖಿಲೇಶ್

Pinterest LinkedIn Tumblr

akilesh-yadavಲಕ್ನೋ: ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಪರಿಸ್ಥಿತಿಯುಂಟಾದಾಗ ಕಪ್ಪು ಹಣವೇ ಭಾರತದ ಆರ್ಥಿಕತೆಗೆ ನೆರವಾಗಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.

ನಾನು ಈ ಬಗ್ಗೆ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಕಪ್ಪು ಹಣವನ್ನು ಸೃಷ್ಟಿಮಾಡಬಾರದು. ಆರ್ಥಿಕ ತಜ್ಞರ ಪ್ರಕಾರ ವಿಶ್ವದಲ್ಲಿ ಆರ್ಥಿಕ ಹಿಂಜರಿತವುಂಟಾದಾಗ ಭಾರತದ ಆರ್ಥಿಕತೆಯಲ್ಲಿ ಕಪ್ಪುಹಣ ಮಹತ್ತರ ಪಾತ್ರವಹಿಸಿತ್ತು. ನಾನು ಕಪ್ಪು ಹಣವನ್ನು ವಿರೋಧಿಸುತ್ತೇನೆ. ನನಗೆ ಅದು ಬೇಡ ಎಂದು ಇಂಡೋ- ಮ್ಯಾನ್ಮಾರ್- ಥಾಯಿಲ್ಯಾಂಡ್ ಫ್ರೆಂಡ್‍ಶಿಪ್ ಕಾರ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿದ ಅವರು ಹೇಳಿದ್ದಾರೆ.

₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವುದರಿಂದ ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಜನರು ಸಾಲುಗಟ್ಟಿ ನಿಂತಿದ್ದಾರೆ. ನೋಟು ರದ್ದು ತೀರ್ಮಾನದಿಂದಾಗಿ ಬಡವರಿಗೆ ಕಷ್ಟವಾಗಿದೆ, ಸಾಮಾನ್ಯ ಜನರಿಗೆ ತೊಂದರೆಯಾಗಿದೆ.

ಭ್ರಷ್ಟಾಚಾರವನ್ನು ನಿಯಂತ್ರಿಸುವುದು ಒಳ್ಳೆಯ ವಿಚಾರವೇ. ಆದರೆ ಭ್ರಷ್ಟಾಚಾರದ ಬಗ್ಗೆ ಜನರಿಗೆ ಮಾಹಿತಿ ಇದ್ದರೆ ಒಳ್ಳೆಯದು. ₹500 ಮತ್ತು ₹1000 ನೋಟುಗಳನ್ನು ಬದಲಾಯಿಸುವ ಮೂಲಕ ಭ್ರಷ್ಟಾಚಾರದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಈ ಹಿಂದೆ ಕಪ್ಪು ಹಣಕ್ಕಾಗಿ ಆ ನೋಟುಗಳನ್ನು ಬಳಸುತ್ತಿದ್ದವರೀಗ 2000 ನೋಟಿಗಾಗಿ ಕಾಯುತ್ತಿದ್ದಾರೆ ಎಂದು ಅಖಿಲೇಶ್ ಪ್ರತಿಕ್ರಿಯಿಸಿದ್ದಾರೆ.

Comments are closed.