ರಾಷ್ಟ್ರೀಯ

ರಾಜಕೀಯಕ್ಕಾಗಿ ಮೋದಿ ತಮ್ಮ ತಾಯಿಯನ್ನು ಬಳಸಬಾರದಿತ್ತು: ಅರವಿಂದ ಕೇಜ್ರಿವಾಲ್

Pinterest LinkedIn Tumblr

kejriನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಗುಜರಾತ್‍ನಲ್ಲಿ ಬ್ಯಾಂಕ್‍ಗೆ ಬಂದು ನೋಟು ಬದಲಾವಣೆ ಮಾಡಿದ ಸುದ್ದಿಯ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೋದಿಯವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.

ಮೋದಿಯವರು ತಮ್ಮ ರಾಜಕೀಯಕ್ಕಾಗಿ 97ರ ಹರೆಯದ ತಮ್ಮ ಅಮ್ಮ ಹೀರಾಬೆನ್ ಮೋದಿಯವರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದ್ದಾರೆ.
ಒಂದು ವೇಳೆ ಅವರು ನನ್ನ ಅಮ್ಮ ಆಗಿದ್ದರೆ, ನಾನು ಈ ರೀತಿ ಅವರನ್ನು ಸಾಲಿನಲ್ಲಿ ನಿಲ್ಲಿಸುತ್ತಿರಲಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

Arvind Kejriwal ✔ @ArvindKejriwal
मोदीजी ने राजनीति के लिए माँ को लाइन में लगा ठीक नहीं किया। कभी लाइन में लगना हो तो मैं ख़ुद लाइन में लगूँगा, माँ को लाइन में नहीं लगाउँगा
3:02 PM – 15 Nov 2016
2,736 2,736 Retweets 3,341 3,341 likes

₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಮೋದಿಯವರ ಐತಿಹಾಸಿಕ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಮಂಗಳವಾರ ಬೆಳಗ್ಗೆ ಕೇಜ್ರಿವಾಲ್ ಠರಾವು ಮಂಡಿಸಿದ್ದರು.

Comments are closed.