ರಾಷ್ಟ್ರೀಯ

ಹಳೆ ನೋಟು ಬದಲಾಯಿಸಲು ಸ್ವತಃ ಬ್ಯಾಂಕಿಗೆ ಬಂದ ಪ್ರಧಾನಿ ಮೋದಿ ತಾಯಿ

Pinterest LinkedIn Tumblr

modi-mother

ಅಹಮದಾಬಾದ್: 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರದ ಬಿಸಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬಕ್ಕೂ ತಟ್ಟಿದೆ. ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು ಮಂಗಳವಾರ ಹಳೆ ನೋಟು ಬದಲಾವಣೆಗಾಗಿ ಸ್ವತಃ ಬ್ಯಾಂಕಿಗೆ ಬಂದ ಘಟನೆ ಘಟಿಸಿದೆ.

95 ವರ್ಷ ವಯಸ್ಸಿನ ಹೀರಾಬೆನ್, ಕ್ಯೂನಲ್ಲಿ ನಿಂತು ಅಲ್ಲಿದ್ದವರ ಸಹಾಯ ಪಡೆದು ದಾಖಲೆಗಳಿಗೆ ಹೆಬ್ಬೆಟ್ಟು ಒತ್ತಿ ಹಣ ವಿನಿಮಯ ಮಾಡಿಕೊಂಡಿದ್ದಾರೆ. ವೀಲ್‍ಚೇರ್‍ನಲ್ಲಿ ಬಂದ ಹೀರಾಬೆನ್ ಬ್ಯಾಂಕ್ ತಲುಪಿದ ನಂತರ ನಡೆದುಕೊಂಡು ಒಳಬಂದರು.

ನವೆಂಬರ್ 8 ರಂದು ಪ್ರಧಾನಿ ಮೋದಿ 500 ಹಾಗೂ 1000 ರೂ ನೋಟುಗಳನ್ನು ನಿಷೇಧಿಸಿದ್ದು, ಜನರು ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಬ್ಯಾಂಕ್ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ.

ಇನ್ನು 50 ದಿನಗಳವರೆಗೆ ಈ ಕಷ್ಟವನ್ನು ಸಹಿಸಿಕೊಳ್ಳಿ. ನಾನೂ ಮಧ್ಯಮವರ್ಗದಿಂದ ಬಂದವನೇ. ನನಗೆ ನಿಮ್ಮ ಕಷ್ಟ ಅರ್ಥವಾಗುತ್ತದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದರು. ಬ್ಯಾಂಕ್‍ಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಂತರೂ ದೇಶಕ್ಕೆ ಒಳ್ಳೇದಾಗೋದಾದ್ರೆ ನಾವಿದನ್ನು ಸಹಿಸಿಕೊಳ್ತೇವೆ ಎಂದು ಜನ ಹೇಳಿದ್ದಾರೆ.

Comments are closed.