ಹರಿಯಾಣಾ: ಮಹಿಳೆಯರ ಗುಂಪು ಯುವಕನೊಬ್ಬನನ್ನು ಮನಬಂದಂತೆ ಥಳಿಸಿ ಹಣವನ್ನು ಕಿತ್ತುಕೊಂಡ ನಂತಕ ಯುವಕ ಹನಿ ಟ್ರ್ಯಾಪ್‌ಗೊಳಗಾದ ಘಟನೆ ಹರಿಯಾಣಾದ ಫರಿದಾಬಾದ್ ಜಿಲ್ಲೆಯಿಂದ ವರದಿಯಾಗಿದೆ.
ಯುವಕನ ಮೇಲೆ ಹಲ್ಲೆ ಮಾಡಿದ ಮೂವರು ಮಹಿಳೆಯರನ್ನು ಬಂಧಿಸಲಾಗಿದ್ದು, ಗ್ಯಾಂಗ್‌ನಲ್ಲಿದ್ದ ಕೆಲ ಆರೋಪಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಹಿಳೆಯರ ಗುಂಪು ಯುವಕರಿಗೆ ಸೆಕ್ಸ್ ಸುಖದ ಆಸೆ ತೋರಿಸಿ ನಂತರ ಅವರನ್ನು ಲೂಟಿ ಮಾಡುತ್ತಿದ್ದರು. ಇದೀಗ ಪೊಲೀಸರ ವಶದಲ್ಲಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹನಿ ಟ್ರ್ಯಾಪ್ ಗ್ಯಾಂಗ್ ಬಲೆಗೆ ಸಿಲುಕಿದ ಪಾಲಿ ಗ್ರಾಮದ ಯುವಕ ಅಮಿತ್ ಭಾಡನಾ ಪ್ರಕಾರ, ಆರಂಭದಲ್ಲಿ ಮಹಿಳೆಯರು ತಾವು ಪೊಲೀಸ್ ಅಧಿಕಾರಿಗಳೆಂದು ಮಾಹಿತಿ ನೀಡಿ ಕರೆದುಕೊಂಡು ಹೋಗಿ ನಂತರ ಸೆಕ್ಸ್‌ನಲ್ಲಿ ಭಾಗಿಯಾಗುವಂತೆ ಒತ್ತಾಯಿಸಿದ್ದಾರೆ. ತದನಂತರ ಹಣ ನೀಡದಿದ್ದಲ್ಲಿ ಅತ್ಯಾಚಾರವೆಸಗಿದ್ದಾಗಿ ಪೊಲೀಸರಿಗೆ ದೂರು ನೀಡುವುದಾಗಿ ಮಹಿಳೆಯರು ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿಸಿದ್ದಾನೆ.
ಮಹಿಳೆಯರಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿರುವುದರಿಂದ ಕಂಗಾಲಾದ ಅಮಿತ್, ಪೊಲೀಸ್ ಠಾಣೆಗೆ ತೆರಳಿ ಘಟನೆಯ ಬಗ್ಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದಾನೆ.
ಪೊಲೀಸರು, ಅಮಿತ್‌ನಿಗೆ ಮಹಿಳೆಯರನ್ನು ಭೇಟಿ ಮಾಡಿ ಹಣ ನೀಡುವಂತೆ ಹೇಳಿದ್ದಾರೆ. ಅಮಿತ್‌ನಿಂದ ಹಣ ಪಡೆಯಲು ಬಂದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಹನಿ ಟ್ರ್ಯಾಪ್ ಗ್ಯಾಂಗ್‌ನ ಇತರ ಮೂವರು ಮಹಿಳೆಯರು ಮತ್ತು ಓರ್ವ ಪುರುಷ ಆರೋಪಿ ಪರಾರಿಯಾಗಿದ್ದಾರೆ. ಆದರೆ, ಆರೋಪಿಗಳ ಬಗ್ಗೆ ಸುಳಿವು ದೊರಕಿದ್ದು, ಶೀಘ್ರದಲ್ಲಿಯೇ ಬಂಧಿಸುವ ವಿಶ್ವಾಸವಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.