ಅಂತರಾಷ್ಟ್ರೀಯ

ಪತಿಯೊಂದಿಗೆ ವಿಚ್ಚೇದನ ಪಡೆಯಲು ವಿವಾಹದ ಡ್ರೆಸ್ ಹರಾಜಿಗಿಟ್ಟ ಪತ್ನಿ !

Pinterest LinkedIn Tumblr

dress

ಆಘಾತಕಾರಿ ಘಟನೆಯೊಂದರಲ್ಲಿ ಇಂಗ್ಲೆಂಡ್ ಮೂಲದ 28 ವರ್ಷದ ಮಹಿಳೆಯೊಬ್ಬಳು, ಪತಿಯಿಂದ ವಿಚ್ಚೇದನ ಪಡೆಯಲು ಅಗತ್ಯವಾದ ಹಣವನ್ನು ಹೊಂದಿಸಲು ವಿವಾಹದ ಡ್ರೆಸ್‌ಗಳನ್ನು 2000 ಪೌಂಡ್‌ಗಳಿಗೆ ಆನ್‌ಲೈನ್ ಮೂಲಕ ಹರಾಜಿಗಿಟ್ಟ ವಿಚಿತ್ರ ಘಟನೆ ವರದಿಯಾಗಿದೆ.

ಕಳೆದ 2014ರಲ್ಲಿ ವಿವಾಹವಾದ ಚೆಸ್ಟರ್‌ಫೀಲ್ಡ್‌ ನಗರದ ಸಮಂತಾ ರಾಗ್, ತನ್ನ ಪತಿ ವಿವಾಹವಾದ 18 ತಿಂಗಳು ನಂತರ ತೊರೆದು ಬೇರೆ ಯುವತಿಯೊಂದಿಗೆ ವಾಸಿಸುತ್ತಿರುವುದನ್ನು ಖಚಿತಪಡಿಸಿಕೊಂಡ ನಂತರ ವಿವಾಹದ ಡ್ರೆಸ್‌ಗಳನ್ನು ಮಾರಾಟಕ್ಕಿಡಲು ನಿರ್ಧರಿಸಿದ್ದಾಳೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ವಂಚಕ ಪತಿಯಿಂದ ವಿಚ್ಚೇದನ ಪಡೆಯಲು ಅಗತ್ಯವಾದ ಹಣಕ್ಕಾಗಿ ವಿವಾಹದ ಡ್ರೆಸ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ ಎಂದು ಸಮಂತಾ ತಿಳಿಸಿದ್ದಾಳೆ. ಇಲ್ಲಿಯವರೆಗೆ 12 ಜನ ಹರಾಜಿನ ಬಗ್ಗೆ ವಿಚಾರಣೆ ನಡೆಸಿದ್ದರಾದರೂ ಯಾರು ಖರೀದಿಸಲು ಮುಂದಾಗಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾಳೆ.

ಒಂದು ವೇಳೆ ನಿಮಗೂ ಕೆಟ್ಟ ನೆನಪುಗಳು ಕಾಡುತ್ತಿದ್ದರೆ, ನಿರೀಕ್ಷೆ, ಕನಸುಗಳು ಬತ್ತಿಹೋಗಿದ್ದರೆ ಅಂತಹವರು ನನ್ನ ವಿವಾಹದ ಡ್ರೆಸ್ ಖರೀದಿಸಬಹುದು. ನೀವು ಖರೀದಿಸಿದ ಡ್ರೆಸ್ ನಿಮಗೆ ಸಂತೋಷವನ್ನು ತರಬಹುದು. ಒಂದು ವೇಳೆ ನಿಮಗೆ ಇಷ್ಟವಾಗದಿದ್ದರೆ ಆನ್‌ಲೈನ್‌ನಲ್ಲಿ ಮರುಮಾರಾಟ ಮಾಡಿ ಎಂದು ತಿಳಿಸಿದ್ದಾಳೆ.

ಒಂದು ವೇಳೆ, ವಿವಾಹದ ಡ್ರೆಸ್ ಬಗ್ಗೆ ಯಾವುದೇ ಅನುಮಾನಗಳಿದ್ದಲ್ಲಿ ದಯವಿಟ್ಟು ನನ್ನನ್ನು ಸಂಪರ್ಕಿಸಿ ಎಂದು ಸಮಂತಾ ರಾಗ್ ಗ್ರಾಹಕರಲ್ಲಿ ಮನವಿ ಮಾಡಿದ್ದಾಳೆ.

Comments are closed.