ರಾಷ್ಟ್ರೀಯ

ಉತ್ತರಾಖಂಡ್‍ನಲ್ಲಿ ಮಳೆ ರುದ್ರನರ್ತನ : ಕೇದಾರನಾಥ ಯಾತ್ರೆ ಸ್ಥಗಿತ

Pinterest LinkedIn Tumblr

Kedarnathಡೆಹ್ರಾಡೂನ್, ಆ.13- ಉತ್ತರಾಖಂಡ್‍ನಲ್ಲಿ ವರುಣನ ಆರ್ಭಟದಿಂದಾಗಿ ರಾಜ್ಯದ ಅನೇಕ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಶಿಥಿಲವಾಗಿವೆ. ಈ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಕೇದಾರನಾಥ ಯಾತ್ರೆಗೆ ತೆರಳುವ ಮಾರ್ಗದಲ್ಲಿ ದುರಸ್ತಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದ್ದು, ಸದ್ಯಕ್ಕೆ ಯಾತ್ರೆಗೆ ಅಡ್ಡಿಯಾಗಿದೆ. ಸೋಮವಾರದ ಬಳಿಕ ಯಾತ್ರಾರ್ಥಿಗಳಿಗೆ ಮಾರ್ಗ ಮುಕ್ತವಾಗಲಿದೆ.

Comments are closed.