ರಾಷ್ಟ್ರೀಯ

ನಾಲಿಗೆಯನ್ನು ಕತ್ತರಿಸಿ ಕಾಳಿ ದೇವಿಗೆ ಅರ್ಪಿಸಿದ ಯುವತಿ

Pinterest LinkedIn Tumblr

kaliಭೋಪಾಲ್: ಆಧುನಿಕ ಜಗತ್ತಿನಲ್ಲಿ, ಅದರಲ್ಲೂ ವಿದ್ಯಾವಂತರಲ್ಲೂ ಮೂಢನಂಬಿಕೆ ಇನ್ನು ಉಳಿದುಕೊಂಡಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಸಿಗಲಾರದು. 19 ವರ್ಷದ ವಿದ್ಯಾರ್ಥಿನಿವೋರ್ವಳು ಕಾಳಿ ಮಾತೆಗೆ ನಾಲಿಗೆಯನ್ನೇ ಕತ್ತರಿಸಿಕೊಟ್ಟ ಘಟನೆ ಮಧ್ಯ ಪ್ರದೇಶದ ಭೋಪಾಲ್‌‌ನಲ್ಲಿ ನಡೆದಿದೆ.

ಮಧ್ಯಪ್ರದೇಶದ ಟಿಆರ್‌ಎಸ್ ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿನಿ ಆರತಿ ಡುಬೇ ಒಂದು ಕನಸನ್ನು ಕಂಡಳಂತೆ. ಆಕೆಯ ಕನಸಲ್ಲಿ ಬಂದ ದೇವಿ ನೀನು ನಾಲಿಗೆಯನ್ನು ಅರ್ಪಿಸಿದರೆ ನಿನ್ನ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಕೇಳಿಕೊಂಡಳಂತೆ. ಅದನ್ನು ನಿಜವೆಂದು ರೀವಾ ನಗರದಲ್ಲಿರುವ ಪುರಾತನ ಕಾಳಿ ಮಾತೆ ದೇವಾಲಯಕ್ಕೆ ಬಂದು ಚಾಕುವಿನಿಂದ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾಳೆ. ತಕ್ಷಣ ಆಕೆ ಕುಸಿದು ಬಿದ್ದಿದ್ದಾಳೆ.

ಪ್ರಜ್ಞೆ ಬರುತ್ತಿದ್ದಂತೆ ಎದ್ದು ನಿಂತ ಆಕೆ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿದ್ದಾಳೆ. ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು, ವೈದ್ಯರು ಸ್ಥಳಕ್ಕೆ ಆಗಮಿಸಿದರು. ಆಕೆಯನ್ನು ಪರೀಕ್ಷಿಸಿದ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಆರತಿ ಸಹೋದರ, ದೇವಿಗೆ ನಾಲಿಗೆ ನೀಡುತ್ತೇನೆ ಎಂದು ಆಕೆ ಹೇಳಿದ್ದಳು. ಆದರೆ ಅದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದಿದ್ದಾನೆ. ತಮಷೆ ಮಾಡುತ್ತಿದ್ದಾಳೆ ಎಂದುಕೊಂಡು ಸುಮ್ಮನಾಗಿದ್ದೆ ಎಂದಿದ್ದಾಳೆ.

ನನ್ನ ಬಳಿ ಹೇಳಿಕೊಂಡಿದ್ದಳು. ಆದರೆ ಆಕೆ ತಮಾಷೆ ಮಾಡುತ್ತಿದ್ದಾಳೆಂದು ನಾನು ಆಕೆಯ ಮಾತು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಹೇಳಿದ್ದಾನೆ. ಅವಿದ್ಯಾವಂತ ಮತ್ತು ಮೂಢ ಜನರು ತಮ್ಮ ದೇಹದ ಅಂಗಗಳನ್ನು ದೇವರನ್ನು ಮೆಚ್ಚಿಸಲು ಬಲಿ ನೀಡುವುದನ್ನು ಕೇಳಿದ್ದೆ. ಆದರೆ ಕಾಲೇಜಿಗೆ ಹೋಗುವ ನನ್ನ ತಂಗಿಯೇ ಇಷ್ಟೊಂದು ಅ೦ಧವಿಶ್ವಾಸವನ್ನು ಹೊಂದಿದ್ದಾಳೆ ಎಂಬುದು ಗೊತ್ತಿರಲಿಲ್ಲ ಎಂದು ಹೇಳಿದ್ದಾನೆ.

ಆರತಿ ನಾಲಿಗೆ ಕತ್ತರಿಸಿಕೊಂಡು ಕೆಳಕ್ಕೆ ಬಿದ್ದ ಕೂಡಲೇ ದೇವಸ್ಥಾನದ ಪೂಜಾರಿ ಮತ್ತು ಅಲ್ಲಿ ನೆರೆದಿದ್ದ ಭಕ್ತಾದಿಗಳು ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಬದಲು ಆಕೆಗಾಗಿ ಪ್ರಾರ್ಥನೆ ಸಲ್ಲಿಸುತ್ತ ನಿಂತೇ ಇದ್ದರು.

ದೇವಾವುದೇವತೆಗಳಿಗೆ ದೇಹದ ಅಂಗಾಂಗಗಳನ್ನು ಅರ್ಪಿಸುವುದು ನಮ್ಮ ದೇಶದಲ್ಲಿ ಹೊಸ ಸಂಗತಿ ಏನಲ್ಲ. ಆದರೆ ವಿದ್ಯಾವಂತರಲ್ಲೂ ಸಹ ಇಷ್ಟೊಂದು ಅಂಧವಿಶ್ವಾಸ ಬೇರೂರಿರುವುದು ಮಾತ್ರ ಖೇದನೀಯ.

Comments are closed.