ನವದೆಹಲಿ: ಭಾರಿ ಭದ್ರತೆಯಿರುವ ಸಂಸತ್ತಿನಲ್ಲಿಯೇ ಕಳ್ಳತನವಾಗಿದೆ ಎಂದರೆ ನಂಬಲು ಸಾಧ್ಯವೆ? ಸಂಸತ್ತಿನಲ್ಲಿರುವ ತೃಣಮೂಲ ಕಾಂಗ್ರೆಸ್ ಕಚೇರಿಯಲ್ಲಿ 30 ಸಾವಿರ ರೂಪಾಯಿ ಕಳ್ಳತನವಾದ ಘಟನೆ ವರದಿಯಾಗಿದೆ.
ತೃಣಮೂಲ ಕಾಂಗ್ರೆಸ್ ನಾಯಕರೊಬ್ಬರು 30 ಸಾವಿರ ರೂಪಾಯಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಟಿಎಂಸಿ ಪಕ್ಷದ ಕ್ಷೇಮಾಭಿವೃದ್ಧಿಗಾಗಿ ಪಕ್ಷದ ಪ್ರತಿಯೊಬ್ಬ ಸಂಸದರಿಂದ 2 ಸಾವಿರ ರೂಪಾಯಿಗಳ ದೇಣಿಗೆ ಸಂಗ್ರಹಿಸಲಾಗಿತ್ತು ಎಂದು ಪಕ್ಷದ ನಾಯಕಿ ರತ್ನಾ ಡೇ ನಾಗ್ ತಿಳಿಸಿದ್ದಾರೆ.
ಪಕ್ಷದ ಇಮೇಜ್‌ಗೆ ಧಕ್ಕೆ ಬರಬಹುದು ಎನ್ನುವ ಆತಂಕದಿಂದ ದೂರು ಕೊಡಲು ವಿಳಂಬವಾಗಿದೆ ಎಂದು ಟಿಎಂಸಿ ನಾಯಕಿ ರತ್ನಾ ಡೇ ನಾಗ್ ಮಾಹಿತಿ ನೀಡಿದ್ದಾರೆ.
Comments are closed.