ರಾಷ್ಟ್ರೀಯ

ಉತ್ತರಪ್ರದೇಶ ಶಾಲೆಯೊಂದರಲ್ಲಿ ರಾಷ್ಟ್ರಗೀತೆ ನಿಷೇಧ ದುರದೃಷ್ಟಕರ: ಕೇಂದ್ರ ಮಂತ್ರಿ

Pinterest LinkedIn Tumblr

MA-convent-schoolನವದೆಹಲಿ: ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ರಾಷ್ಟ್ರಗೀತೆ ಹಾಡುವುದನ್ನು ನಿಷೇಧಿಸಿರುವುದು ‘ಗಂಭೀರ’ ಮತ್ತು ‘ದುರದೃಷ್ಟಕರ’ ಎಂದು ಮಂಗಳವಾರ ಕೇಂದ್ರ ಸರ್ಕಾರ ಹೇಳಿದೆ.

ಲೋಕಸಭೆಯ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಕಿರಿತ್ ಸೋಮಯ್ಯ, ಶಾಲೆಯೊಂದರಲ್ಲಿ ರಾಷ್ಟ್ರಗೀತೆ ನಿಷೇದ ಗಂಭೀರ ವಿಷಯ ಎಂದಿದ್ದಲ್ಲದೆ ಇದಕ್ಕೆ ಸರ್ಕಾರದ ಪ್ರತಿಕ್ರಿಯೆಗಾಗಿ ಆಗ್ರಹಿಸಿದರು.

ಉತ್ತರ ಪ್ರದೇಶದ ಬಿಜೆಪಿ ಲೋಕಸಭಾ ಸದಸ್ಯರು ಈ ಆಗ್ರಹವನ್ನು ಬೆಂಬಲಿಸಿದರು.

ಸದಸ್ಯರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಸ್ ಎಸ್ ಅಹುಲ್ವಾಲಿಯಾ “ಈ ಪ್ರಕರಣ ಗಂಭೀರವಾದದ್ದು ಮತ್ತು ಈ ಘಟನೆ ದುರದೃಷ್ಟಕರ” ಎಂದಿದ್ದಾರೆ.

ಸಂಬಂಧ ಪಟ್ಟ ಸಚಿವರ ಬಳಿ ಈ ಪ್ರಕರಣವನ್ನು ಕೊಂಡೊಯ್ಯುವುದಾಗಿ ಅವರು ತಿಳಿಸಿದ್ದಾರೆ.

ಎಂ ಎ ಕಾನ್ವೆಂಟ್ ಶಾಲೆಯಲ್ಲಿ ಆಡಳಿತ ಮಂಡಳಿ ರಾಷ್ಟ್ರಗೀತೆ ಹಾಡುವುದನ್ನು ನಿಷೇಧಿಸಿರುವ ನಡೆಯನ್ನು ವಿರೋಧಿಸಿ ಪ್ರಾಂಶುಪಾಲರು ಮತ್ತು ಏಳು ಜನ ಶಿಕ್ಷಕರು ರಾಜೀನಾಮೆ ನೀಡಿದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಶಾಲೆಯ ವ್ಯವಸ್ಥಾಪಕರನ್ನು ದೇಶದ್ರೋಹದ ಆರೋಪದ ಮೇಲೆ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

Comments are closed.