ರಾಷ್ಟ್ರೀಯ

ಮಣಿಪುರ ಸಿಎಂ ಆಗುವೆ; ಎಎಫ್‌ಎಸ್‌ಪಿಎ ರದ್ದತಿಗೆ ನಿರ್ದೇಶಿಸುವೆ: ಇರೋಮ್‌ ‘ಉಕ್ಕಿ’ನ ನುಡಿ

Pinterest LinkedIn Tumblr

erolಇಂಫಾಲ (ಪಿಟಿಐ): ‘ಮಣಿಪುರದ ಮುಖ್ಯಮಂತ್ರಿಯಾಗಿ, ಇಲ್ಲಿ ಜಾರಿಯಲ್ಲಿರುವ ಸಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ರದ್ದುಮಾಡಲು ನಿರ್ದೇಶನ ನೀಡುವುದು ನನ್ನ ಮೊದಲ ಕೆಲಸ’ – ಇದು ಎಎಫ್‌ಎಸ್‌ಪಿಎ ರದ್ದುಮಾಡಬೇಕು ಎಂದು ಆಗ್ರಹಿಸಿ 16 ವರ್ಷಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹಕ್ಕೆ ಮಂಗಳವಾರ ಅಂತ್ಯ ಹಾಡಿದ ಇರೋಮ್‌ ಶರ್ಮಿಳಾ ಅವರ ‘ಉಕ್ಕಿ’ನ ನುಡಿ.

‘ನಾನು ಹೋರಾಟವನ್ನು ಅಂತ್ಯಗೊಳಿಸಿಲ್ಲ. ಹೋರಾಟದ ರೀತಿಯನ್ನು ಬದಲಾವಣೆ ಮಾಡುತ್ತೇನೆ. ಅಹಿಂಸಾ ಮಾರ್ಗ ಆಯ್ದುಕೊಳ್ಳುತ್ತೇನೆ. ನನ್ನ ಶಕ್ತಿ ಜನರ ಸಮಸ್ಯೆಯನ್ನು ದೂರ ಮಾಡಲಿದೆ’ ಎಂದಿರುವ ಶರ್ಮಿಳಾ ಇರೋಮ್‌, ‘ಪುನಃ ರಾಜಕೀಯಕ್ಕೆ ಸೇರಿ, ಮುಖ್ಯಮಂತ್ರಿಯಾಗಿ ಎಎಫ್‌ಎಸ್‌ಪಿಎ ರದ್ದುಗೊಳಿಸುವುದು ನನ್ನ ಮೊದಲ ಆದ್ಯತೆ’ ಎಂದಿದ್ದಾರೆ.

‘ಉಕ್ಕಿನ ಮಹಿಳೆ’ ಎಂದೇ ಬಿಂಬಿತವಾಗಿರುವ ಇರೋಮ್‌ ಶರ್ಮಿಳಾ ಅವರನ್ನು ಪೊಲೀಸ್‌ ಬಿಗಿ ಭದ್ರತೆಯಲ್ಲಿ ಬೆಳಿಗ್ಗೆ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಲಾಯಿತು. ನಂತರ ಅವರು ಉಪವಾಸ ಸತ್ಯಾಗ್ರಹ ಕೈಬಿಟ್ಟಿರುವುದಾಗಿ ಘೋಷಿಸಿದರು. ಬಳಿಕ ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Comments are closed.