ನವದೆಹಲಿ: ಜೈಯಾಕ್ಸ್ ಮೊಬೈಲ್ಸ್ ಸಂಸ್ಥೆ ಎರಡು ನೂತನ ಸರಣಿಯ ಝೆಡ್214ಐ ಮತ್ತು ಝೆಡ್314 ಫೀಚರ್
ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಫೀಚರ್ ಫೋನ್ ಸರಣಿಯ ಹೊಸ ಮೊಬೈಲ್‌ಗಳನ್ನು ಜೈಯಾಕ್ಸ್ ಸಂಸ್ಥೆಯ ಸಿಇಓ ದೀಪಕ್ ಕಾಬು ಅನಾವರಗೊಳಿಸಿ ಮಾತನಾಡಿದರು.
ಝೆಡ್214ಐ ಮತ್ತು ಝೆಡ್314 ಫೀಚರ್ ಫೋನ್‌ಗಳು ಆಧುನಿಕ ತಂತ್ರಜ್ಞಾನದಿಂದ ಕೂಡಿದ್ದು, ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಗುಣಮ ಟ್ಟದ ಮೊಬೈಲ್‌ಗಳಾಗಿವೆ.
ಡ್ನೂಯೆಲ್ ಸಿಮ್, 2.4 ಇಂಚ್ ಡಿಸ್‌ಪ್ಲೇ, 16ಜಿಬಿವರೆಗೆ ಎಕ್ಸ್‌ಪ್ಯಾಂಡಬಲ್ ಮೆಮೊರಿ, ವೈರ್‌ಲೆಸ್ ಎಫ್‌ಎಂ, 1400 ಮತ್ತು 1700 ಎಂಎಎಚ್ ಬ್ಯಾಟರಿ, ಜಿಪಿಆರ್‌ಎಸ್ ಸಪೋರ್ಟ್, ಎಲ್ ಇಡಿ ಟಾರ್ಚ್ ಹಾಗೂ ಇನ್ನಿತರ ಸೌಲಭ್ಯಗಳನ್ನು ಈ ಮೊಬೈಲ್ ಒಳಗೊಂಡಿವೆ. ಝೆಡ್214ಐ ಬೆಲೆ 1,343 ಮತ್ತು ಝೆಡ್314 ಬೆಲೆ 1,443 ರೂ.ಗಳಾಗಿದ್ದು, ಗೋಲ್ಡ್ ಬ್ಲಾಕ್, ಬ್ಲಾಕ್ ಗೋಲ್ಡ್, ವೈಟ್ ಗೋಲ್ಡ್ ಹಾಗೂ ಬ್ಲಾಕ್ ಸಿಲ್ವರ್ ಬಣ್ಣಗಳಲ್ಲಿ ಲಭ್ಯ ಎಂದು ತಿಳಿಸಿದ್ದಾರೆ.
-ಉದಯವಾಣಿ
Comments are closed.