ಐರ್ಲೆಂಡ್ ವಿಮಾನಯಾನ ಕಂಪನಿ ರ್ಯಾನ್ಏರ್ನ ಪೈಲಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣಳಾಗಿದ್ದಾಳೆ. 32 ವರ್ಷದ ಮಾರಿಯಾ ಪೀಟರ್ಸನ್ ತನ್ನ ಜೀವನ ಕ್ರಮ ಬಿಂಬಿಸುವ ಹಲವು ಫೋಟೋಗಳನ್ನು ಇನ್ಸ್ಟಾಗ್ರಾಮ್ ಸೇರಿ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಲಕ್ಷಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ.
ಕಾಕ್ಪಿಟ್ನಲ್ಲಿ ಸೆಲ್ಪಿ , ವಿವಿಧ ಸ್ಥಳಗಳಲ್ಲಿ ಬಿಕಿನಿಯಲ್ಲಿ ಯೋಗ ಮಾಡುತ್ತಿರುವ ಚಿತ್ರಗಳನ್ನೂ ಈಕೆ ಅಪ್ಲೋಡ್ ಮಾಡಿದ್ದಾರೆ. ಇದನ್ನು ನೋಡಲು ಯುವಕರು ಮುಗಿಬೀಳುತ್ತಿದ್ದಾರಂತೆ. ಇನ್ಸ್ಟಾಗ್ರಾಮ್ಲ್ಲಿ ಈಕೆಯನ್ನು ಫಾಲೋ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಕೆಲ ತಿಂಗಳುಗಳಲ್ಲಿ 1.28 ಲಕ್ಷ ಜನರು ಈಕೆಯನ್ನು ಫಾಲೋ ಮಾಡಿದ್ದಾರೆ. ಸ್ವೀಡನ್ ಮೂಲದ ಈಕೆ ಸದ್ಯ ಇಟಲಿ ನಿವಾಸಿ. 25ನೇ ವರ್ಷದಲ್ಲಿ ಲಘು ವಿಮಾನದ ಪೈಲಟ್ ಆದ ಈಕೆ ಈಗ ವಾಣಿಜ್ಯ ವಿಮಾನಗಳನ್ನು ಚಲಾಯಿಸುತ್ತಿದ್ದಾಳೆ.
ನನ್ನ ಫೋಟೋಗಳಿಗೆ ಉತ್ತಮ ಪ್ರತಿಕ್ರಿಯೆ ಬರುತ್ತಿರುವುದು ಖುಷಿ ತಂದಿದೆ. ಹೀಗಾಗಿ ಪೋಟೋ ಅಪ್ಲೋಡ್ ಮುಂದುವರಿಸುತ್ತೇನೆ. ವಿಮಾನಯಾನ ಹಾಗೂ ಪೈಲಟ್ ವೃತ್ತಿಗೆ ಸಂಬಂಧಿಸಿದಂತೆ ಅನೇಕರು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಅದಕ್ಕೂ ಉತ್ತರ ನೀಡುತ್ತಿದ್ದೇನೆ. ವಿಮಾನಯಾನಕ್ಕೆ ಸಂಬಂಧಿಸಿದ ಕೆಲ ಫೋಟೋಗಳನ್ನು ಅಪ್ಲೋಡ್ ಮಾಡಿದಾಗ ಜನರ ಪ್ರತಿಕ್ರಿಯೆ ಉತ್ತಮವಾಗಿತ್ತು. ಆ ದೃಶ್ಯ ಗಳನ್ನು ಅವರಿಗೆ ತಲುಪಿಸಲು ಫೋಟೋ ಅಪ್ಲೋಡ್ ಮಾಡಿದ್ದೇನೆ. ಹೊಸ ಪ್ರದೇಶ, ರಾಷ್ಟ್ರಗಳಿಗೆ ಭೇಟಿ ನೀಡುವುದು ತುಂಬ ಇಷ್ಟ. ಅಲ್ಲಿನ ಫೋಟೋಗಳನ್ನೂ ಅಪ್ಲೋಡ್ ಮಾಡಿದ್ದೇನೆ ಎಂದು ಮಾರಿಯಾ ಹೇಳಿಕೊಂಡಿದ್ದಾಳೆ.
Comments are closed.