ಚಂಡೀಘರ್: ಹಾಸ್ಯ ಚಲನಚಿತ್ರ ‘ದ ಲೆಜೆಂಡ್ ಆಫ್ ಮೈಕೆಲ್ ಮಿಶ್ರಾ’ ಪ್ರದರ್ಶನದ ಮೇಲೆ ನಿಷೇಧ ಹೇರಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ.
“ಎರಡು ತಿಂಗಳವರೆಗೆ ಈ ಸಿನೆಮಾದ ಪ್ರದರ್ಶನವನ್ನು ರದ್ದುಗೊಳಿಸಿ ಪಂಜಾಬ್ ಸರ್ಕಾರ ಆದೇಶ ಹೊರಡಿಸಿದೆ ಮತ್ತು ಈ ಸಮಯದಲ್ಲಿ ಇದನ್ನು ಪ್ರಮಾಣಪತ್ರ ಪಡೆಯದ ಸಿನೆಮಾ ಎಂದು ಪರಿಗಣಿಸಲಾಗುತ್ತದೆ” ಎಂದು ಸರ್ಕಾರದ ವಕ್ತಾರ ಹೇಳಿದ್ದಾರೆ.
“ಮಹರ್ಷಿ ವಾಲ್ಮೀಕಿ ಬಗೆಗೆ ಆಕ್ಷೇಪಣೀಯ ಸಂಗತಿಗಳು ಸಿನೆಮಾದಲ್ಲಿದ್ದು ವಾಲ್ಮೀಕಿ ಸಮುದಾಯ ಇದಕ್ಕೆ ವಿರೋಧ ತೋರಿರುವುದರಿಂದ” ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
“ರಾಜ್ಯದಲ್ಲಿ ಕಷ್ಟ ಪಟ್ಟು ಸಾಧಿಸಲಾಗಿರುವ ಸೌಹಾರ್ದ ಮತ್ತು ಶಾಂತಿಯನ್ನು ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ಈ ಚಿತ್ರದ ಪ್ರದರ್ಶನ ಭಾರಿ ಪ್ರತಿಭಟನೆಗಳಿಗೆ ಎಡೆಮಾಡಿಕೊಡುವ ಸಾಧ್ಯತೆ ಇದೆ” ಎಂದು ವಕ್ತಾರ ಹೇಳಿದ್ದಾರೆ.
ಅರ್ಶದ್ ವಾರ್ಸಿ, ಅದಿತಿ ರಾವ್ ಮತ್ತು ಬೊಮ್ಮನ್ ಇರಾನಿ ನಟಿಸಿರುವ ಈ ಚಿತ್ರ ಆಗಸ್ಟ್ 5 ಕ್ಕೆ ಬಿಡುಗಡೆಯಾಗಲಿದೆ.
Comments are closed.