ಲಕ್ನೋ : ಉತ್ತರ ಪ್ರದೇಶದ ಕಬ್ಬಿನ ಗದ್ದೆಯೊಂದರಲ್ಲಿ ಶಾಲೆಗೆ ಹೋಗುವ ಹುಡುಗಿಯೊಬ್ಬಳನ್ನು ಕಾಮುಕರು ಸುತ್ತುವರಿದಿದ್ದಾರೆ. ಆಕೆಯ ಕೈಗಳು ನಡುಗುತ್ತಿವೆ. ಆಕೆಯ ಕಣ್ಣುಗಳ ಭಯದಿಂದ ದೊಡ್ಡದಾಗಿ ತೆರೆದುಕೊಂಡಿವೆ. ತನ್ನ ಶೀಲಕ್ಕೆ ಎದುರುಗಾಗಿರುವ ಆಪತ್ತನ್ನು ಆಕೆ ಗ್ರಹಿಸಿದ್ದಾಳೆ. ಸಹಾಯಕ್ಕಾಗಿ ಆಕೆ ಬೊಬ್ಬಿಡುತ್ತಿದ್ದಾಳೆ. ಆದರೆ ಆಕೆಯ ಚೀರಾಟ ಯಾರಿಗೂ ಕೇಳಿಸುವುದಿಲ್ಲ; ಯಾರೂ ಆಕೆಯ ನೆರವಿಗೆ ಧಾವಿಸಿ ಬರುತ್ತಿಲ್ಲ. ಆಕೆಯನ್ನು ಸುತ್ತುವರಿದ ಕಾಮುಕರು ಒಬ್ಬೊಬ್ಬರಾಗಿ ಆಕೆಯ ಮೇಲೆರಗಿ ಆಕೆಯನ್ನು ಅತ್ಯಾಚಾರ ಮಾಡುತ್ತಾರೆ. ಕಾಮುಕರಲ್ಲಿ ಒಬ್ಟಾತ ಇಡಿಯ ಕೃತ್ಯವನ್ನು ತನ್ನ ಸ್ಮಾರ್ಟ್ ಫೋನಿನಲ್ಲಿ ವಿಡಿಯೋ ಮಾಡಿಕೊಳ್ಳುತ್ತಾನೆ. ಕೆಲವೇ ದಿನಗಳಲ್ಲಿ ಈ ರೇಪ್ ದೃಶ್ಯಾವಳಿಯ ವಿಡಿಯೋ ಉತ್ತರ ಪ್ರದೇಶದ ಎಲ್ಲೆಡೆ ವಿಡಿಯೋ ಅಂಗಡಿಗಳಲ್ಲಿ 50ರಿಂದ 150 ರೂ. ಬೆಲೆಗೆ ಸಿಗುತ್ತದೆ. ಜನರು ಮುಗಿಬಿದ್ದು ಅದನ್ನು ಖರೀದಿಸುತ್ತಾರೆ.
ಅತ್ಯಾಚಾರಕ್ಕೆ ಕುಖ್ಯಾತವಾಗಿರುವ ಉತ್ತರ ಪ್ರದೇಶದಲ್ಲಿ ಇಂದು ಎಲ್ಲೆಂದರಲ್ಲಿ, ವಿಡಿಯೋ ಅಂಗಡಿಗಳಲ್ಲಿ ಕೇವಲ ಬ್ಲೂ ಫಿಲಂ ವಿಡಿಯೋಗಳು ಮಾರಾಟವಾಗುತ್ತಿಲ್ಲ; ಬದಲು ಸಣ್ಣ ವಯಸ್ಸಿನ ಅಮಾಯಕ, ಅಸಹಾಯಕ ಹುಡುಗಿಯರ ಮೇಲಿನ ನೈಜ ಅತ್ಯಾಚಾರಗಳ ವಿಡಿಯೋಗಳು ಸಾವಿರಾರು ಸಂಖ್ಯೆಯಲ್ಲಿ ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ.
ಕೆಲವು ರೇಪ್ ವಿಡಿಯೋಗಳು 30 ಸೆಕೆಂಡುಗಳದ್ದಾದರೆ ಇನ್ನು ಕೆಲವು ಐದು ನಿಮಿಷಗಳಷ್ಟು ದೊಡ್ಡದಿರುತ್ತವೆ. ಅಂಗಡಿಗೆ ಬರುವ ನಂಬಿಗಸ್ಥ ಗ್ರಾಹಕರಿಗೆ ಈ ವಿಡಿಯೋಗಳನ್ನು ಸಿಡಿಯಲ್ಲಿ ಇಲ್ಲವೇ ಪೆನ್ ಡ್ರೈವ್‌ಗಳಲ್ಲಿ ಹಾಕಿಕೊಡಲಾಗುತ್ತದೆ.
ಆಗ್ರಾದ ಕಾಸಾಗಂಜ್ ಮಾರುಕಟ್ಟೆಯ ವಿಡಿಯೋ ಅಂಗಡಿಯೊಂದರ ಮಾಲಕ ಹೇಳುತ್ತಾರೆ : ಬ್ಲೂ ಫಿಲಂ ವಿಡಿಯೋಗಳ ಕಾಲ ಮುಗಿದು ಹೋಗಿದೆ. ಈಗ ಏನಿದ್ದರೂ ನೈಜ ಅತ್ಯಾಚಾರದ ವಿಡಿಯೋಗಳ ಕಾಲ. ಜನರು ಈ ಬಗೆಯ ವಿಡಿಯೋಗಳನ್ನು ಹುಚ್ಚೆದ್ದು ಕಾಣಬಯಸುತ್ತಾರೆ. ಈ ಬಗೆಯ ನೈಜ ಅತ್ಯಾಚಾರದ ವಿಡಿಯೋಗಳನ್ನು ಡೀಲರ್‌ಗಳು ಟ್ವಿಟರ್, ಟಂಬ್ಲರ್ , ಫೇಸ್‌ಬುಕ್‌ಗಳಿಂದ ಡೌನ್ ಲೋಡ್ ಮಾಡಿಕೊಂಡು ಬಳಿಕ ಅವುಗಳನ್ನು ಜೋಡಿಸಿಕೊಂಡು ಸಿಡಿ ಮಾಡಿ ಮಾರುತ್ತಾರೆ. ಪೆನ್ ಡ್ರೈವ್ ಹಿಡಿದುಕೊಂಡು ಬರುವ ಗ್ರಾಹಕರಿಗೆ ಆ ವಿಡಿಯೋಗಳನ್ನು ಹಾಕಿ ಕೊಡುತ್ತಾರೆ.
ಎಷ್ಟೋ ವೇಳೆ ಅತ್ಯಾಚಾರಿಗಳೇ ಈ ಬಗೆಯ ವಿಡಿಯೋ ಚಿತ್ರಿಕೆಗಳನ್ನು ಮಾಡಿರುತ್ತಾರೆ ಮತ್ತು ರೇಪ್ ಸಂತ್ರಸ್ತ ಮಹಿಳೆಯರು ಮತ್ತು ಹುಡುಗಿಯರನ್ನು ಬ್ಲ್ಯಾಕ್ ಮೇಲ್ ಮಾಡಲು ಉಪಯೋಗಿಸುತ್ತಾರೆ. ಕೊನೆಗೆ ಅವರೇ ಆ ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಿಗೆ ಅಪ್‌ಲೋಡ್ ಮಾಡುತ್ತಾರೆ ಇಲ್ಲವೇ ವಿಡಿಯೋ ಅಂಗಡಿಗಳಿಗೆ ಒಳ್ಳೆಯ ಬೆಲೆಗೆ ಮಾರುತ್ತಾರೆ.
ಇಂತಹ ವಿಡಿಯೋಗಳು ವೈರಲ್ ಆಗುವುದೇ ತಡ ಅವುಗಳು ವಿಡಿಯೋ ಆಂಗಡಿಗಳಲ್ಲಿ ಮಾರಾಟಕ್ಕೆ ಸಿಗುತ್ತವೆ. “ನಿಮಗೆ ಗೊತ್ತಿರುವ, ನಿಮ್ಮದೇ ಕಾಲನಿಯ ಹುಡುಗಿಯ ರೇಪ್ ವಿಡಿಯೋ ಇದೆ; ಇದು ಲೇಟೆಸ್ಟ್ ಮತ್ತು ಹಾಟೆಸ್ಟ್ ಆಗಿದೆ; ನೋಡುತ್ತೀರಾ?’ ಎಂದು ವಿಡಿಯೋ ಅಂಗಡಿಗಳು ತಮ್ಮ ಗ್ರಾಹಕರನ್ನು ಪುಸಲಾಯಿಸುತ್ತಾರೆ.
ತೀರ ಈಚಿನ ರೇಪ್ ವಿಡಿಯೋದಲ್ಲಿ ಅತ್ಯಾಚಾರಿಗಳು 20ರ ಹರೆಯದ ಹುಡುಗಿಯನ್ನು ರೇಪ್ ಮಾಡುವ ಮುನ್ನ ಆಕೆಯ ಹುಡುಗನನ್ನು ಚೆನ್ನಾಗಿ ಥಳಿಸುವುದನ್ನು ಕಾಣಿಸಲಾಗಿದೆ. ಆತ “ಮಾಫ್ ಕರೋ, ಮಾಫ್ ಕರೋ (ನನ್ನನ್ನು ಬಿಟ್ಟು ಬಿಡಿ) ಎಂದು ಗೋಗರೆಯುತ್ತಾನೆ. ಅತ್ಯಾಚಾರಕ್ಕೆ ಗುರಿಯಾಗುತ್ತಿರುವ ಹುಡುಗಿಯು “ಕಮ್ ಸೇ ಕಮ್ ವಿಡಿಯೋ ಮತ್ ಉತಾರೋ (ಕನಿಷ್ಠ ವಿಡಿಯೋ ಶೂಟ್ ಮಾಡಬೇಡಿ) ಎಂದು ಗೋಗರೆಯುತ್ತಾಳೆ.
ಆಗ್ರಾ ನಗರದ ಎಸ್‌ಪಿ ಘುಳೇ ಸುಶೀಲ್ ಚಂದ್ರಭಾನ್ ಈ ಬಗ್ಗೆ ಹೀಗೆ ಹೇಳುತ್ತಾರೆ : ಇವತ್ತು ಕ್ರಿಮಿನಲ್ ಕಾಮುಕರು ಹುಡುಗಿಯರನ್ನು ಕೇವಲ ರೇಪ್ ಮಾಡಿ ಆನಂದಿಸುವುದಷ್ಟೇ ಅಲ್ಲ; ರೇಪ್ ಮಾಡುವಾಗ ಅದರ ವಿಡಿಯೋ ಕೂಡ ಶೂಡ್ ಮಾಡಿಕೊಳ್ಳುತ್ತಾರೆ – ಹುಡುಗಿಯರನ್ನು ಬ್ಲ್ಯಾಕ್ ಮೇಲ್ ಮಾಡಲು, ಆ ಮೂಲಕ ಪದೇ ಪದೇ ಆಕೆಯನ್ನು ಸೆಕ್ಸ್ ಗೆ ಬಳಸಿಕೊಳ್ಳಲು, ಅಂತಿಮವಾಗಿ ಆ ವಿಡಿಯೋಗಳನ್ನು ಮಾರಲು, ಫೇಸ್ ಬುಕ್‌ಗೆ ಹಾಕಲು ಅಂತಹ ವಿಡಿಯೋಗಳನ್ನು ಬಳಸುತ್ತಾರೆ. ಅಂತಿಮವಾಗಿ ಈ ಬಗೆಯ ವಿಡಿಯೋಗಳು ಹಣಕ್ಕಾಗಿ ಅಂಗಡಿಗಳನ್ನು ತಲುಪುತ್ತವೆ ಮತ್ತು ಅವುಗಳನ್ನು ಕಾಣಲು ಜನರು ಹುಚ್ಚೆದ್ದು ಬೀಳುತ್ತಾರೆ.
ಈ ಹಿಂದೆ ನಾವು ತಾಜ್‌ಗಂಜ್ ಮತ್ತು ಸದರ್ ಪ್ರದೇಶದಲ್ಲಿ ಸೆಕ್ಸ್ ವಿಡಿಯೋ, ಪೈರಸಿ ವಿಡಿಯೋ ಮಾರುವ ಅಂಗಡಿಗಳ ಮೇಲೆ ದಾಳಿ ಮಾಡುತ್ತಿದ್ದೇವೆ. ಇವತ್ತು ನೈಜ್ ರೇಪ್ ವಿಡಿಯೋಗಳನ್ನು ಮುಟ್ಟುಗೋಲು ಹಾಕಲು ದಾಳಿ ಮಾಡುತ್ತಿದ್ದೇವೆ. ಇಂದು ಎಲ್ಲೆಡೆ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ಅತ್ಯಾಚಾರಗಳು ಒಂದೇ ಸಮನೆ ಹೆಚ್ಚಾಗುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ಹುಡುಗಿಯೊಬ್ಬಳು ತನ್ನ ರೇಪ್ ವಿಡಿಯೋವನ್ನು ಅತ್ಯಾಚಾರಿಗಳು ಇಂಟರ್‌ನೆಟ್‌ನಲ್ಲಿ ಹಾಕಿದ್ದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇನ್ನೊಬ್ಟಾಕೆ ತನ್ನ ಗೆಳೆಯನೇ ತನ್ನ ನಗ್ನ ಚಿತ್ರಗಳನ್ನು ಇಂಟರ್‌ನೆಟ್‌ನಲ್ಲಿ ಹಾಕಿದ್ದಕ್ಕೆ ಖನ್ನಳಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೂ ನಾವು ರೇಪ್ ವಿಡಿಯೋ ಅಂಗಡಿಗಳ ಮೇಲೆ ದಾಳಿ ಮಾಡುವುದನ್ನು ಮುಂದುವರಿಸುತ್ತೇವೆ. ಆದರೆ ಸಮಾಜದಲ್ಲಿಂದು ಮಹಿಳೆಯರು ಹಾಗೂ ಹುಡುಗಿಯರ ಮೇಲಿನ ರೇಪ್ ಟ್ರೆಂಡ್ ವ್ಯಾಪಕವಾಗಿದೆ. ಅದನ್ನು ಪೂರ್ತಿಯಾಗಿ ನಿಲ್ಲಿಸುವುದು ಸಾಧ್ಯವೇ ಇಲ್ಲವೆಂಬಂತಹ ಪರಿಸ್ಥಿತಿ ತಲೆದೋರಿದೆ.
-ಉದಯವಾಣಿ
Comments are closed.