ದೆಹಲಿ: ಆರ್ ಎಸ್ ಎಸ್, ಬಿಜೆಪಿ ಮತ್ತು ವಿಹೆಚ್ ಪಿ ನಾಯಕರನ್ನು ಇಸಿಸ್ ಉಗ್ರರು ದಾಳಿ ನಡೆಸುವ ಸಂಚು ರೂಪಿಸಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ(ಎನ್ಐಎ)ಯು ರಹಸ್ಯ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ.
ಭಟ್ಕಳದ ಆಪಾದಿತ ಐಸಿಸ್ ಉಗ್ರ ಶಫೀ ಅರ್ಮಾರ್ ಸಿರಿಯದಲ್ಲಿದ್ದುಕೊಂಡೇ ಭಾರತದಲ್ಲಿ ಆರ್‌ಎಸ್‌ಎಸ್, ಬಿಜೆಪಿ ಮತ್ತು ವಿಎಚ್‌ಪಿ ನಾಯಕರ ಮೇಲೆ ದಾಳಿ ನಡೆಸುವ ಯೋಜನೆಯನ್ನು ನಡೆಸುತ್ತಿದ್ದಾರೆ ಎಂಬುವುದಾಗಿ ವರದಿಯಾಗಿದೆ.
ಮಾತ್ರವಲ್ಲದೆ ಭಾರತದಲ್ಲಿ ವಿದೇಶೀ ಪ್ರಜೆಗಳನ್ನು ಗುರಿ ಇರಿಸಿಕೊಂಡು ಐಸಿಸ್ ಉಗ್ರರು ದಾಳಿ ನಡೆಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಶಂಕಿತ ಐಸಿಸ್ ಉಗ್ರನೊಬ್ಬನನ್ನು ತೀವ್ರವಾಗಿ ಪ್ರಶ್ನಿಸಲಾದಾಗ ಆತ ಈ ವಿಷಯವನ್ನು ಬಾಯಿ ಬಿಟ್ಟಿರುವುದಾಗಿ ಎನ್‌ಐಎ ಮೂಲಗಳು ತಿಳಿಸಿವೆ.
Comments are closed.