ರಾಷ್ಟ್ರೀಯ

2015ರಲ್ಲಿ ಕೆಟ್ಟ ರಸ್ತೆಗಳಿಗೆ ಜೀವತೆತ್ತವರ ಸಂಖ್ಯೆ 10,727 ..!

Pinterest LinkedIn Tumblr

roadನವದೆಹಲಿ,ಆ.1-ತಗ್ಗುಗಳು, ಸ್ವೀಡ್ ಟ್ರೇಕರ್‍ಗಳು ಮತ್ತು ದುರಸ್ತಿ ಅಥವಾ ನಿರ್ಮಾಣ ಹಂತದ ರಸ್ತೆಗಳಿಂದಾಗಿ ಸಂಭವಿಸಿದ ಅಪಘಾತಗಳಿಗೆ ದೇಶದಲ್ಲಿ ಕಳೆದ ವರ್ಷ(2015) 10,727 ಜನ ಮೃತಪಟ್ಟಿದ್ದಾರೆ.

ರಸ್ತೆಯಲ್ಲಿನ ಗುಂಡಿಗಳಿಗೆ 2015ರಲ್ಲಿ 3,416 ಜನ ಬಲಿಯಾಗಿದ್ದಾರೆ. ಕಳೆದ ವರ್ಷ ಈ ಸಂಖ್ಯೆ 3,039 ಆಗಿತ್ತು. ಒಟ್ಟಾರೆ 2014ನೇ ವರ್ಷಕ್ಕಿಂತ 2015ರಲ್ಲಿ ಹಾಳಾದ ರಸ್ತೆಗೆ ಬಲಿಯಾದವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಮಹಾರಾಷ್ಟ್ರದಲ್ಲಿ 2014ಕ್ಕಿಂತ 2015ರಲ್ಲಿ ಅಪಘಾತದಲ್ಲಿ 7 ಪಟ್ಟು ಜನ ಸಾವನ್ನಪ್ಪಿದ್ದಾರೆ. ಆಶ್ಚರ್ಯವೆಂದರೆ, ಅತ್ಯಂತ ಹಾಳಾದ, ಕೆಟ್ಟ ರಸ್ತೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಅಪಘಾತ ಸಾವುಗಳು 2014ಕ್ಕಿಂದ 2015ರಲ್ಲಿ ತುಂಬಾ ಕಡಿಮೆಯಾಗಿದೆ.

ಸಾರಿಗೆ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ ದೇಶಾದ್ಯಂತ ಕಳೆದ ವರ್ಷ ಬರೀ ರಸ್ತೆ ಗುಂಡಿಗಳಿಂದ ಸಂಭವಿಸಿದ ಅಪಘಾತಗಳಿಗೆ 10,876 ಜನ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಬಹುಶಃ ರಸ್ತೆಗಳು ಸುಸ್ಥಿತಿಯಲ್ಲಿದ್ದರೆ ಅಪಘಾತಗಳು, ಸಾವುಗಳ ಸಂಖ್ಯೆ ಕಡಿಮೆಯಾಗಲಿದೆ ಎನ್ನುವುದರಲ್ಲಿ ಸಂದೇಹವಿಲ್ಲ ಎನ್ನುತ್ತಾರೆ ಸಾರಿಗೆ ವಿಭಾಗದ ನಿವೃತ್ತ ಸಂಶೋಧಕ ಅಶೀಶ್ ಕುಮಾರ್.

Comments are closed.