ರಾಷ್ಟ್ರೀಯ

ಇನ್ಮುಂದೆ ಫೋನ್ ಬ್ಯಾಂಕಿಂಗ್​ಗೆ ‘ವೈಸ್ ಪಾಸ್​ವರ್ಡ್’!

Pinterest LinkedIn Tumblr

Phone-Banking-Webಚೆನ್ನೈ: ಎಟಿಎಂ ಕಾರ್ಡ್ ಕಳೆದುಕೊಂಡು ಅದು ಇನ್ನಾರದೋ ಕೈಗೆ ಸಿಕ್ಕಿ ಹಣ ಕಳೆದುಕೊಂಡಿರುವ ಪ್ರಕರಣಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಕಷ್ಟು ನಡೆದಿವೆ. ಹಾಗೇ ಫೋನ್ ಬ್ಯಾಂಕಿಂಗ್ನಲ್ಲಿಯೂ ಇಂಥ ಪ್ರಕರಣಗಳು ಬಹಳ ನಡೆದಿವೆ. ಜತೆ ಜೊತೆಗೆ ಫೋನ್ ಬ್ಯಾಂಕಿಂಗ್ ವೇಳೆ ಪಾಸ್ವಲ್ಡ್ ಟೈಪ್ ಮಾಡುವುದು ಕಿರಿಕಿರಿ ಅನಿಸಿ ಗ್ರಾಹಕ ಸಾಕಪ್ಪಾ ಸಾಕು… ಎಂದು ಈ ವಿಧಾನವನ್ನೇ ಕೈಬಿಡುವ ಸಾಧ್ಯತೆಗಳೂ ಸಾಕಷ್ಟಿರುವುದರಿಂದ ಬ್ಯಾಂಕ್ಗಳು ಈಗ ಗ್ರಾಹಕ ಸ್ನೇಹಿಯನ್ನಾಗಿಸಲು ‘ವೈಸ್ ಪಾಸ್ವರ್ಡ್’ ಮೊರೆ ಹೋಗುತ್ತಿವೆ.

ಇಲ್ಲಿ ನಿಮ್ಮ ನೈಜ ಧ್ವನಿಯೇ ಪಾಸ್ವರ್ಡ್. ಧ್ವನಿಯಲ್ಲಿ ಕೊಂಚ ಏರುಪೇರಾದರೆ ಬ್ಯಾಂಕಿಂಗ್ ಕಷ್ಟವೆನಿಸಬಹುದು. ಆದರೆ ಗ್ರಾಹಕನಿಗೆ ಫೋನ್ ಬ್ಯಾಂಕಿಂಗ್ನಲ್ಲಾಗುವ ಕಿರಿಕಿರಿಗಳನ್ನು ತಪ್ಪಿಸಲಿಕ್ಕಾಗಿ ‘ವೈಸ್ ಪಾಸ್ವರ್ಡ್’ ಪರಿಚಯಿಸುವ ಸಾಹಸವನ್ನು ಐಸಿಐಸಿಐ ಬ್ಯಾಂಕ್ ಮಾಡಿದೆ.

ಬ್ಯಾಂಕಿಂಗ್ ವೇಳೆ ನೀವೇ ನಮ್ಮ ಗ್ರಾಹಕರೂ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಮಾನ್ಯವಾಗಿ ಕಾರ್ಡ್ ನಂಬರ್, ಟಿ-ಪಿನ್ ಅಥವಾ ಜನ್ಮದಿನಾಂಕವನ್ನು ಟೈಪ್ ಮಾಡಿ ದೃಢೀಕರಿಸಬೇಕಾಗುತ್ತದೆ. ಜತೆಗೆ ಕಾರ್ಡ್ನ ಎಕ್ಸ್ಪೈರಿ ದಿನಾಂಕ ಅಥವಾ ಸಿವಿವಿ ನಂಬರ್ಗಳನ್ನು ನೀಡಬೇಕಾಗುವ ಸಾಧ್ಯತೆಯೂ ಇರುತ್ತದೆ. ಆದರೆ ಇನ್ಮುಂದೆ ಇದರ ಬದಲಾಗಿ ನಿಮ್ಮ ಧ್ವನಿಯನ್ನೇ ಪಾಸ್ವರ್ಡ್ ಮಾಡಿಕೊಳ್ಳಬಹುದು. ಭದ್ರತಾ ದೃಷ್ಟಿಯಿಂದಲೂ ಇದು ಸಹಕಾರಿ ಎಂದು ಐಸಿಐಸಿಐ ಬ್ಯಾಂಕ್ ಕರ್ಯನಿರ್ವಹಣಾ ನಿರ್ದೇಶಕ ರಾಜೀವ್ ಸಭರ್ವಾಲ್ ತಿಳಿಸಿದ್ದಾರೆ.

ಈ ವ್ಯವಸ್ಥೆಯಿಂದ ಇನ್ನೊಂದು ಪ್ರಯೋಜನ ಏನೆಂದರೆ, ಸಮಯದ ಉಳಿತಾಯ ಸಾಧ್ಯ. ತೀವ್ರವಾದ ಕೆಲಸದ ಒತ್ತಡದಲ್ಲಿ ಇದು ಇನ್ನಷ್ಟು ಪ್ರಯೋಜನಕ್ಕೆ ಬರುತ್ತದೆ. ಅದೆಷ್ಟೋ ಕಿರಿಕಿರಿಗಳು ತಪ್ಪುತ್ತದೆ ಎಂದು ಹೇಳಿದ್ದಾರೆ.

ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರ ಬ್ಯಾಂಕ್ ಸೇರಿ ಇನ್ನು ಕೆಲವು ಬ್ಯಾಂಕ್ಗಳು ಈಗಾಗಲೇ ಈ ತಂತ್ರಜ್ಞಾನ ಅಳವಡಿಕೆಗೆ ಮುಂದಾಗಿದೆ. ಐಸಿಐಸಿಐ ಬ್ಯಾಂಕ್ 2015ರ ಮೇ ಮಾಸದಲ್ಲಿಯೇ ಪರಿಚಯಿಸಿದ್ದು, ಈಗಾಗಲೇ 3 ಮಿಲಿಯನ್ ಗ್ರಾಹಕರಿಗೆ ಈ ಸೌಕರ್ಯ ಒದಗಿಸಿದೆ. ಈ ವರ್ಷಾಂತ್ಯಕ್ಕೆ ಇನ್ನಷ್ಟು ಗ್ರಾಹಕರಿಗೆ ವಿನೂತನ ಸೌಲಭ್ಯ ಒದಗಿಸುವ ವಿಶ್ವಾಸ ವ್ಯಕ್ತಪಡಿಸಿದೆ. ಇದನ್ನೇ ಎಟಿಎಂ ಕಾರ್ಡದಾರರಿಗೂ ನೀಡುವ ಉದ್ದೇಶ ಹೊಂದಿರುವುದಾಗಿ ಹೇಳಿಕೊಂಡಿದೆ.

Comments are closed.