ರಾಷ್ಟ್ರೀಯ

ಶಿಕ್ಷಕರಿಂದ ತಂದೆಗೆ ಅವಮಾನ, 13 ವರ್ಷದ ವಿದ್ಯಾರ್ಥಿನಿ ಆತ್ಯಹತ್ಯೆ

Pinterest LinkedIn Tumblr

suನವದೆಹಲಿ: ಶಾಲೆಯ ಫೀಸ್ ಕಟ್ಟಲಿಲ್ಲವೆಂದು ಪ್ರಾಂಶುಪಾಲರು ಮತ್ತು ಶಿಕ್ಷಕರು ತನ್ನ ತಂದೆಗೆ ಅವಮಾನಿಸಿದರು ಮತ್ತು ಪೊಲೀಸರು ಬಲವಂತವಾಗಿ ತಂದೆಯನ್ನು ಎಳೆದೊಯ್ದರು ಎಂದು ಮನನೊಂದ 13 ವರ್ಷದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಘಾಜಿಯಾಬಾದ್ನಲ್ಲಿ ನಡೆದಿದೆ.

ಪ್ರಿಯಾಂಶಿ ಎಂಬ 9ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಶಾಲೆಗೆ ಫೀಸ್ ತುಂಬಲು ತಡವಾದ ಕಾರಣ ಶಾಲೆಯ ಶಿಕ್ಷಕರೊಬ್ಬರು ಬಾಲಕಿಯ ತಂದೆಯನ್ನು ಭೇಟಿ ಮಾಡಲು ಅವರ ಮನೆಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರು ಸೇರಿದಂತೆ ಮೂರ್ನಾಲ್ಕು ಶಿಕ್ಷಕರು ಬಾಲಕಿಯ ಮನೆಗೆ ಬಂದಿದ್ದಾರೆ. ಬಾಲಕಿಯ ತಂದೆ ಮತ್ತು ಶಾಲಾ ಶಿಕ್ಷಕರ ನಡುವೆ ಫೀಸ್ ಕುರಿತಂತೆ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ಶಿಕ್ಷಕನೊಬ್ಬ ಚಪ್ಪಲಿಯಿಂದ ಬಾಲಕಿಯ ತಂದೆಗೆ ಹೊಡೆದಿದ್ದಾನೆ. ಜತೆಗೆ ಪೊಲೀಸರಿಗೆ ಕರೆ ಮಾಡಿ ಬಾಲಕಿಯ ತಂದೆ ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ದೂರು ಕೊಟ್ಟಿದ್ದಾರೆ. ಪೊಲೀಸರು ಬಾಲಕಿಯ ತಂದೆಯನ್ನು ಠಾಣೆಗೆ ಕರೆದೊಯ್ದು ವಿಚಾರಣೆ ಸಹ ನಡೆಸಿದ್ದಾರೆ.

ಇದರಿಂದ ಮನನೊಂದ ಬಾಲಕಿ ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರು ಆತ್ಯಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದು, ಶಿಕ್ಷಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments are closed.