ರಾಷ್ಟ್ರೀಯ

ಕೇವಲ 15 ರೂ. ಗೆ ಹತ್ಯೆಯಾದ ದಂಪತಿ!

Pinterest LinkedIn Tumblr

dalithಲಖನೌ: ಉತ್ತರ ಪ್ರದೇಶದ ಮಣಿಪುರ ಜಿಲ್ಲೆಯಲ್ಲಿ 15 ರೂ. ಸಾಲ ಹಿಂದಿರುಗಿಸುವಲ್ಲಿ ವಿಫಲರಾದ ದಂಪತಿಗಳನ್ನು ಅಂಗಡಿ ಮಾಲೀಕ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.

ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ದಲಿತ ದಂಪತಿಗಳು ಎಂದಿನಂತೆ ದಿನನಿತ್ಯದ ವಸ್ತುಗಳನ್ನು ಕೊಳ್ಳಲು ದಿನಸಿ ಅಂಗಡಿಗೆ ತೆರಳಿದ್ದಾರೆ. ಆಗ ಅಂಗಡಿಯ ಮಾಲೀಕ ಅಶೋಕ್ ಮಿಶ್ರಾ ದಲಿತ ದಂಪತಿಗೆ 15 ರೂ. ಸಾಲ ವಾಪಸ್ ಮಾಡುವಂತೆ ತಿಳಿಸಿದ್ದಾನೆ.

ಈ ಸಂದರ್ಭದಲ್ಲಿ ದಲಿತ ದಂಪತಿ ಮತ್ತು ಅಂಗಡಿ ಮಾಲೀಕನ ನಡುವೆ ವಾಗ್ವಾದ ನಡೆದಿದೆ. ಇದರಿಂದ ಸಿಟ್ಟಿಗೆದ್ದ ಅಶೋಕ್ ಮಿಶ್ರಾ ಕೊಡಲಿಯಿಂದ ದಲಿತ ದಂಪತಿ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ದಲಿತ ದಂಪತಿ ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಸ್ಥಳೀಯರು ಸೇರಿ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂಬುವುದಾಗಿ ವರದಿಯಾಗಿದೆ.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Comments are closed.