ನವದೆಹಲಿ: ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂತಿರುಗಿಸಲು ಯಾವುದೇ ಶಾಸನಬದ್ಧ ನೆಲೆ ಇಲ್ಲ ಎಂದು ಬ್ರಿಟನ್ ಸಚಿವ ಅಲೋಕ ಶರ್ಮಾ ಅವರು ಹೇಳಿದ್ದಾರೆ.
ಏಷ್ಯಾ ಮತ್ತು ಫೆಸಿಫಿಕ್ ಗೆ ಬ್ರಿಟನ್ ನ ನೂತನ ಸಚಿವರಾಗಿರುವ ಅಲೋಕ ಶರ್ಮಾ ಕೊಹಿನೂರ್ ವಜ್ರವನ್ನು ಭಾರತಕ್ಕೆ ಹಿಂದಿರುಗಿಸಲು ಯಾವುದೇ ಶಾಸನಬದ್ಧ ನೆಲೆ ಇಲ್ಲ ಎಂಬುದು ಇಂಗ್ಲೆಂಡ್ ಸರ್ಕಾರದ ಅಭಿಪ್ರಾಯವಾಗಿದೆ ಎಂದು ಇದೀಗ ಹೇಳಿದ್ದಾರೆ.
ಪ್ರಧಾನಿ ಮೋದಿ ಸರ್ಕಾರವು ಕಳೆದ ಏಪ್ರಿಲ್ ನಲ್ಲಿ ಕೊಹಿನೂರ್ ವಜ್ರವನ್ನು ಕಳವು ಮಾಡಲಾಗಿದೆ ಎಂದು ಪರಿಗಣಿಸಲಾಗದು ಏಕೆಂದರೆ ಅದನ್ನು ಸಿಖ್ ದೊರೆ ಮಹಾರಾಜ ರಣ್ ಜಿತ್ ಸಿಂಗ್ ಅವರ ಪುತ್ರ ದುಲೀಪ್ ಸಿಂಗ್ ಅವರು ಬ್ರಿಟಿಷರಿಗೆ ಉಡುಗೊರೆಯಾಗಿ ಕೊಟ್ಟಿದ್ದರು ಎಂದು ಸುಪ್ರೀಂಕೋರ್ಟ್ ಗೆ ತಿಳಿಸಿತ್ತು.
ಕೊಹಿನೂರ್ ವಜ್ರವನ್ನು ಭಾರತ ಮತ್ತು ಇಂಗ್ಲೆಂಡ್ ಎರಡೂ ಸರ್ಕಾರಗಳಿಗೆ ಪರಸ್ಪರ ಸ್ವೀಕಾರಾರ್ಹವಾದ ರೀತಿಯಲ್ಲಿ ಭಾರತಕ್ಕೆ ಮರಳಿ ತರುವ ನಿಟ್ಟಿನಲ್ಲಿ ಮಾರ್ಗ ಹುಡುಕಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಈ ಹಿಂದೆ ತಿಳಿಸಿತ್ತು.
Comments are closed.