ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ‘ಕಬಾಲಿ’ ಚಲನಚಿತ್ರ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿದ್ದರೂ, ಸಿನಿಮಾ ಅಷ್ಟೇನೂ ಚೆನ್ನಾಗಿಲ್ಲ ಎಂಬ ವಿಮರ್ಶೆಗಳು ಹೆಚ್ಚಾಗಿ ಕೇಳಿ ಬರುತ್ತಿವೆ.
ಈ ನಡುವೆಯೇ ಚೆನ್ನೈನಲ್ಲಿ ನಡೆದ ‘ಅರಿಮಾ ಸಂಗಮ’ ಕಾರ್ಯಕ್ರಮದಲ್ಲಿ ಗೀತರಚನೆಕಾರ/ ಕವಿ ವೈರಮುತ್ತು ಕಬಾಲಿ ಸಿನಿಮಾ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.
“ನನಗೆ ನೀವೆಲ್ಲರೂ ಗೊತ್ತು. ಈ ಊರಿನ ಆಗು ಹೋಗುಗಳ ಬಗ್ಗೆಯೂ ಗೊತ್ತು. ರಾಜಕೀಯದ ಬಗ್ಗೆ ಗೊತ್ತಿದೆ, ವಿಜ್ಞಾನದ ಬಗ್ಗೆ ಗೊತ್ತಿದೆ. ನಾಪತ್ತೆಯಾದ ಮಲೇಷ್ಯಾ ವಿಮಾನದ ಬಗ್ಗೆಯೂ ತಿಳಿದಿದೆ. ಕಬಾಲಿ ಸೋತಿದೆ ಎಂಬುದೂ ಗೊತ್ತಿದೆ. ಇದೆಲ್ಲಾ ಎಲ್ಲರೂ ತಿಳಿಯಲೇ ಬೇಕಾಗಿದೆ. ಒಂದೊಳ್ಳೆಯ ಕವಿತೆ, ಇದನ್ನೆಲ್ಲಾ ಅರ್ಥ ಮಾಡಿಸಲು ಮತ್ತು ವ್ಯಕ್ತಿಗಳನ್ನು ಅರಿಯಲು ಸಹಕರಿಸುತ್ತದೆ” ಎಂದು ಅವರು ಹೇಳಿದ್ದಾರೆ.
ರಜನೀಕಾಂತ್ ಸೂಪರ್ ಸ್ಟಾರ್ ಅಲ್ಲ
ಕಬಾಲಿ ಒಬ್ಬ ನಟನ ಸಿನಿಮಾ ಅಲ್ಲ, ಒಬ್ಬ ಸೂಪರ್ ಸ್ಟಾರ್ ನ ಸಿನಿಮಾ ಆಗಿದೆ ಎಂದು ಬಾಲಿವುಡ್ ನಟ ನಾನಾ ಪಾಟೇಕರ್ ಹೇಳಿದ್ದಾರೆ. ನಿಮ್ಮ ಪ್ರಕಾರ ರಜನೀಕಾಂತ್ ಅವರು ದೇಶದ ಸೂಪರ್ ಸ್ಟಾರ್ ಹೌದೋ ಅಲ್ಲವೋ? ಎಂದು ನಾನಾ ಅವರಲ್ಲಿ ಕೇಳಿದಾಗ, ಅವರು ಉತ್ತರಿಸಿದ್ದು ಹೀಗೆ…
“ಸಿನಿಮಾವೇ ದೊಡ್ಡ ಸೂಪರ್ ಸ್ಟಾರ್. ಸಿನಿಮಾದ ಚಿತ್ರಕಥೆ, ನಿರ್ದೇಶನ ಚೆನ್ನಾಗಿದ್ದರೆ ಹೊಸ ನಟರು ಅಭಿನಯಿಸಿದರೂ ಚಿತ್ರ ಗೆಲ್ಲುತ್ತದೆ. ಸಿನಿಮಾ ಚೆನ್ನಾಗಿಲ್ಲದೇ ಇದ್ದರೆ ಬಿಡುಗಡೆಯಾಗಿ ಮೂರು ನಾಲ್ಕು ದಿನಗಳಲ್ಲಿ ಅದರ ಅಬ್ಬರ ಕಡಿಮೆಯಾಗುತ್ತದೆ”.
Comments are closed.