ರಾಷ್ಟ್ರೀಯ

ಪಂಜಾಬ್‍ನಿಂದ ದೂರವಿರಿ ಎಂದು ಹೇಳಿದ್ದಕ್ಕೆ ರಾಜ್ಯಸಭೆಗೆ ರಾಜೀನಾಮೆ ನೀಡಿದೆ: ಸಿಧು

Pinterest LinkedIn Tumblr

Navjot-Singh-Sidhuನವದೆಹಲಿ: ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಂಜಾಬ್‍ನಿಂದ ದೂರವಿರಿ ಎಂದು ನನಗೆ ಹೇಳಿದರು. ಆದ್ದರಿಂದಲೇ ನಾನು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದೆ ಎಂದು ಬಿಜೆಪಿ ನಾಯಕ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

ಸೋಮವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಿಧು, ನಾಲ್ಕು ಬಾರಿ ನನಗೇ ಮತ ನೀಡಿರುವ ಜನರನ್ನು ಮರೆಯುವುದು ಹೇಗೆ?. ಹಾಗಾಗಿಯೇ ನಾನು ರಾಜ್ಯಸಭೆಗೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ.

ಸಿಧು ಅವರು ನಾಮನಿರ್ದೇಶನದ ಮೂಲಕ ಏಪ್ರಿಲ್ 22ರಂದು ರಾಜ್ಯಸಭಾ ಸದಸ್ಯರಾಗಿದ್ದರು.

ಇದೀಗ ರಾಜ್ಯಸಭೆಗೆ ರಾಜೀನಾಮೆ ನೀಡಿ ಹೊರ ನಡೆದಿರುವ ಸಿಧು, ಬಿಜೆಪಿ ತೊರೆದು ಆಮ್ ಆದ್ಮಿ ಪಕ್ಷಕ್ಕೆ ಸೇರಲಿದ್ದಾರೆ ಎಂಬ ಊಹಾಪೋಹಗಳೂ ಕೇಳಿಬರುತ್ತಿವೆ,

Comments are closed.