ಲಂಡನ್ : ಲಂಡನ್‌ನಲ್ಲಿ ನೆಲೆಸಿದ್ದ ಖಾಲಿಸ್ಥಾನ ಚಳವಳಿಯ ಉನ್ನತ ಪ್ರತ್ಯೇಕತಾವಾದಿ ನಾಯಕ ಹಾಗೂ ಸಿಕ್ಖ್ ಖಾಲಿಸ್ಥಾನ ಗಣರಾಜ್ಯದ ಸ್ವಯಂ ಘೋಷಿತ ಅಧ್ಯಕ್ಷ ಡಾ. ಜಗಜಿತ್ ಸಿಂಗ್ ಚೌಹಾಣ್ 1984ರ ಅಕ್ಟೋಬರ್‌ನಲ್ಲಿ ಭಾರತದ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಡೆಯುವುದಕ್ಕೆ ತಿಂಗಳ ಮೊದಲೇ ಆಕೆ ಕೊಲೆಯಾಗುವರೆಂಬ ಭವಿಷ್ಯ ನುಡಿದಿದ್ದರು ಎಂಬುದಾಗಿ ಇದೀಗ ಬ್ರಿಟಿಷ್ ಸರಕಾರ ಬಿಡುಗಡೆ ಮಾಡಿರುವ ಹೊಸ ವರ್ಗೀಕೃತ ದಾಖಲೆಗಳಿಂದ ಬಹಿರಂಗವಾಗಿದೆ.
ಬ್ರಿಟನ್‌ನ ಅಂದಿನ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರ ಸರಕಾರ ಜಗಜಿತ್ ಸಿಂಗ್ ಚೌಹಾಣ್ ವಿರುದ್ಧ ಇನ್ನಷ್ಟು ಕ್ರಮ ತೆಗೆದುಕೊಳ್ಳುವುದನ್ನು ಪರಿಶೀಲಿಸುತ್ತಿತ್ತು ಎಂದು ದಾಖಲೆಗಳು ತಿಳಿಸಿವೆ.
ಜಗಜಿತ್ ಸಿಂಗ್ ಚೌಹಾಣ್ ಅವರು ಬ್ರಿಟನ್‌ನಲ್ಲಿ ಖಾಲಿಸ್ಥಾನ ಕುರಿತಾಗಿ ನೀಡುತ್ತಿದ್ದ ಹೇಳಿಕೆಗಳಿಂದಾಗಿ ಭಾರತ-ಬ್ರಿಟನ್ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಭಾರತೀಯ ಅಧಿಕಾರಿಗಳು ಬ್ರಿಟನ್ ಸರಕಾರಕ್ಕೆ ಪದೇ ಪದೇ ದೂರುತ್ತಿದ್ದರು.
ಲಂಡನ್‌ನಲ್ಲಿದ್ದುಕೊಂಡೇ ಜಗಜಿತ್ ಸಿಂಗ್ ಚೌಹಾಣ್, ಭಾರತದ ಪ್ರಧಾನಿ ರಾಜೀವ್ ಗಾಂಧಿ ಕೂಡ ಉಗ್ರರ ಗುರಿಯಾಗಿದ್ದಾರೆ ಎಂದು ಹೇಳಿದ್ದರು. ಅದೇ ರೀತಿ ರಾಜೀವ್ ಗಾಂಧಿ ಕೂಡ ಅನಂತರದಲ್ಲಿ ಎಲ್‌ಟಿಟಿಇ ಆತ್ಮಾಹುತಿ ದಾಳಿಯಲ್ಲಿ ಹತರಾಗಿದ್ದರು.
ಇಂದಿರಾ ಹಾಗೂ ರಾಜೀವ್ ಗಾಂಧಿ ಅವರ ಹತ್ಯೆಗೆ ಬಹಳ ಮೊದಲೇ ಅವರೀರ್ವರೂ ಕೊಲೆಗೀಡಾಗುವ ಭವಿಷ್ಯ ನುಡಿದಿದ್ದ ಚೌಹಾಣ್, ಬ್ರಿಟನ್ ನೆಲದ ಮೇಲೆ ಇರುವಷ್ಟು ಕಾಲ ಉಭಯ ದೇಶಗಳ ಸಂಬಂಧ ಹಾಳಾಗುವುದೆಂದು ಭಾರತ ಪದೇ ಪದೇ ಬ್ರಿಟನ್‌ಗೆ ಹೇಳುತ್ತಿತ್ತು. ಚೌಹಾಣ್ ಅವರಂತೆ ಇನ್ನೂ ಹಲವಾರು ಸಿಕ್ಖ ಉಗ್ರವಾದಿಗಳು ಲಂಡನ್‌ನಲ್ಲಿ ರಾಜಕೀಯ ಆಸರೆ ಪಡೆದಿದ್ದರು ಎಂದು ರಹಸ್ಯ ದಾಖಲೆಗಳು ತಿಳಿಸಿವೆ.
ಬ್ರಿಟನ್ ಸರಕಾರ ನಿನ್ನೆ ಗುರವಾರ ಬಿಡುಗಡೆ ಮಾಡಿರುವ ವರ್ಗೀಕೃತ ದಾಖಲೆಗಳಲ್ಲಿ ಜೆಕೆಎಲ್‌ಎಫ್ ನಯಕ ಹಾಶೀಮ ಕುರೇಶಿ ಬಗ್ಗೆ ಹಾಗೂ ಬರ್ಮಿಂಗಂನಲ್ಲಿ ನಡೆದಿದ್ದ ಭಾರತದ ರಾಜತಂತ್ರಜ್ಞ ರವೀಂದ್ರನ್ ಮಾತ್ರೆ ಅವರ ಕೊಲೆಯಲ್ಲಿ ಆತ ಶಾಮೀಲಾಗಿರುವನೆಂಬ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸುತ್ತಿದ್ದುದು ಬಹಿರಂಗವಾಗಿದೆ.
-ಉದಯವಾಣಿ
Comments are closed.