ಪಟ್ನಾ, ಬಿಹಾರ: ಔರಂಗಾಬಾದ್ ಜಿಲ್ಲೆಯ ಗಡಿಯಲ್ಲಿರುವ ಚಕರ್‌ಬಂದಾ ಅರಣ್ಯ ಪ್ರದೇಶದಲ್ಲಿ ಸೋಮವಾರ ರಾತ್ರಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಮಾವೊವಾದಿಗಳು ನಡೆಸಿದ ಸ್ಫೋಟದಲ್ಲಿ ಕೋಬ್ರಾ ಬೆಟಾಲಿಯನ್‌ಗೆ ಸೇರಿದ 10 ಸಿಆರ್‌ಪಿಎಫ್ ಸಿಬ್ಬಂದಿ ಮೃತಪಟ್ಟಿದ್ದಾರೆ.
ಪ್ರತಿಯಾಗಿ ಕೋಬ್ರಾ ಪಡೆ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮಾವೊವಾದಿಗಳು ಹತ್ಯೆಯಾಗಿದ್ದಾರೆ. ಸ್ಥಳದಿಂದ ಶಸ್ತ್ರಾಶ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಲವು ಭದ್ರತಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
205ನೇ ಬೆಟಾಲಿಯನ್ ಯೋಧರನ್ನು ರಾಜ್ಯದ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಇದು ಕೋಬ್ರಾ ತಂಡದ ಅತಿದೊಡ್ಡ ದುರ್ಘಟನೆ ಎನ್ನಲಾಗಿದೆ.
Comments are closed.