ಕೋಜಿಕ್ಕೋಡ್: ಅಲ್ಲಾಹುವಿಗಾಗಿ ಹಾಗೂ ಧರ್ಮಕ್ಕಾಗಿ ಹೋರಾಟ ಮಾಡುತ್ತಿರುವ ನಮ್ಮನ್ನು ಭಯೋತ್ಪಾದಕರು ಎಂದು ಕರೆದರೇ ನಾವು ಭಯೋತ್ಪಾದಕರು ಎಂದು ಒಪ್ಪಿಕೊಳ್ಳುತ್ತೇನೆ ಎಂದು ಕೇರಳದಿಂದ ಕಾಣೆಯಾಗಿರುವ ಯುವಕನೋರ್ವ ಸಂದೇಶ ಕಳಹಿಸಿದ್ದಾನೆ.
ಕೇರಳದಿಂದ ಇತ್ತೀಚೆಗೆ ಕಾಣಿಯಾಗಿರುವ 15 ಯುವಜನರ ಪೈಕಿ 23 ವರ್ಷದ ಮೊಹಮ್ಮದ್ ಮಾರ್ವನ್ ಕೂಡ ಒಬ್ಬ. ಈತ ಐಸಿಸ್ಗೆ ಸೇರ್ಪಡೆಯಾಗಿರಬಹುದು ಎಂದು ನಂಬಲಾಗಿದೆ. ಈತ ತನ್ನ ಕುಟುಂಬಸ್ಥರಿಗೆ ಜೂನ್ ಕೊನೆಯಲ್ಲಿ ಸಂದೇಶ ಕಳುಹಿಸಿದ್ದ. ಟೆಲಿಗ್ರಾಫ್ ಆಪ್ ಬಳಸಿಕೊಂಡು ಈತ ಸಂದೇಶ ಕಳುಹಿಸಿದ್ದಾನೆ.
ಕಾಶ್ಮೀರ, ಗುಜರಾತ್ ಮತ್ತು ಮುಜಫರ್ನಗರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮುಸ್ಲಿಮರಿಗೆ ಸಹಕಾರ ನೀಡಲು ಐಸಿಸ್ನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇನೆ. ಕೆಲಸ ಮುಗಿದ ನಂತರ ನಾನು ವಾಪಸ್ಸಾಗುತ್ತೇನೆ ಎಂದು ಹೇಳಿದ್ದಾನೆ. ಇಲ್ಲಿ ವಾಸಿಸುತ್ತಿರುವ ಮುಸ್ಲಿಮರಿಗೆ ಯಾವುದೇ ಮೂಲಸೌಕರ್ಯಗಳಿಲ್ಲ. ಆದರೂ ಇಲ್ಲಿರುವ ಜನರು ಅಲ್ಲಾನನ್ನು ನಂಬುತ್ತಾರೆ, ಅವರು ಅದರಲ್ಲೇ ಸಂತೋಷ ಕಂಡು ಕೊಂಡಿದ್ದಾರೆ ಎಂದು ತಿಳಿಸಿದ್ದಾನೆ.
Comments are closed.