ಶ್ರೀನಗರ: ಬೀದಿಗಿಳಿದು ಪ್ರತಿಭಟನೆ ಮಾಡುವವರನ್ನು ನಿಯಂತ್ರಿಸುವ ವಿಷಯದಲ್ಲಿ ತಮ್ಮ ಸರ್ಕಾರ ಮಾಡಿದ್ದ ತಪ್ಪುಗಳನ್ನೇ ಮೆಹಬೂಬಾ ಮುಫ್ತಿ ಸರ್ಕಾರ ಮುಂದುವರೆಸಿದ್ದು, ತಮ್ಮ ಸರ್ಕಾರಕ್ಕಿಂತಲೂ ಹೆಚ್ಚು ತಪ್ಪು ಮಾಡುತ್ತಿದೆ ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
ರಸ್ತೆಗಿಳಿದು ಪ್ರತಿಭಟನೆ ನಡೆಸುವವರ ವಿಷಯದಲ್ಲಿ 2010 ರಲ್ಲಿ ತಮ್ಮ ಸರ್ಕಾರ ಮಾಡಿದ್ದಕ್ಕಿಂತ ದೊಡ್ಡ ತಪ್ಪನ್ನು ಈಗಿನ ಮೆಹಬೂಬಾ ಮುಫ್ತಿ ಸರ್ಕಾರ ಮಾಡುತ್ತಿದೆ. ತಪ್ಪನ್ನು ಅರ್ಥ ಮಾಡಿಕೊಂಡು ನಾನು ಮುಂದೆಂದೂ ತಪ್ಪನ್ನು ಪುನರಾವರ್ತನೆ ಮಾಡಲಿಲ್ಲ. ಆದರೆ ಸಿಎಂ ಮೆಹಬೂಬಾ ಮುಫ್ತಿ ಸರ್ಕಾರ ಮಾತ್ರ ನಮ್ಮ ಸರ್ಕಾರ ಮಾಡಿದ ತಪ್ಪನ್ನೇ ಮಾಡುತ್ತಿದೆ ಎಂದು ಓಮರ್ ಅಬ್ದುಲ್ಲಾ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
2008-2010 ರಲ್ಲಿ ಕಾಶ್ಮೀರದಲ್ಲಿ ನಡೆದ ಪ್ರತಿಭಟನೆಗಳಿಂದ ರಾಜ್ಯ ಸರ್ಕಾರ ನಡೆಸುತ್ತಿರುವ ಪಿಡಿಪಿ-ಬಿಜೆಪಿ ಪಕ್ಷಗಳು ಯಾವುದೇ ಪಾಠವನ್ನು ಕಲಿತಿಲ್ಲ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉಗ್ರ ಬುರ್ಹಾನ್ ವಾನಿ ಹತ್ಯೆಯ ನಂತರದ ಪರಿಣಾಮದ ಬಗ್ಗೆ ರಾಜ್ಯ ಸರ್ಕಾರ ಯೋಚಿಸಿರಲಿಲ್ಲ, ಅಥವಾ ವಾನಿ ಹತ್ಯೆಗೆ ಸೂಕ್ತ ತಯಾರಿ ನಡೆಸಿರಲಿಲ್ಲವೆಂದು ತೋರುತ್ತದೆ ಎಂದು ಓಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.
Comments are closed.