ರಾಷ್ಟ್ರೀಯ

ರಾಜಕೀಯ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಪುನರ್‍ ರಚನೆ; ಸ್ಮೃತಿ ಇರಾನಿ ಹೊರಕ್ಕೆ

Pinterest LinkedIn Tumblr

Smriti-Iraniನವದೆಹಲಿ: ರಾಜಕೀಯ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ(ಸಿಸಿಪಿಎ) ಪುನರ್‍‍ರಚನೆಯಾಗಿದ್ದು, ಇದರಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ಕೈ ಬಿಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಸಂಪುಟದ 6 ಸಮಿತಿಗಳಲ್ಲಿ ಬದಲಾವಣೆ ಮಾಡಿದ್ದು, ಈ ಸಮಿತಿಗಳಲ್ಲಿ ಸ್ಮೃತಿ ಅವರಿಗೆ ಸ್ಥಾನ ನೀಡಲಿಲ್ಲ!

ಅದೇ ವೇಳೆ ಹೊಸ ಸಚಿವರಿಗೆ ಈ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ.

ಈ ಹಿಂದೆ ಕೇಂದ್ರ ಸಚಿವ ಸಂಪುಟದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವೆಯಾಗಿದ್ದ ಸ್ಮೃತಿ ಅವರನ್ನು ಸಂಪುಟ ಪುನರ್‍‍ರಚನೆ ವೇಳೆ ಜವಳಿ ಖಾತೆ ಸಚಿವೆಯನ್ನಾಗಿ ಮಾಡಲಾಗಿತ್ತು. ಮಾನವ ಸಂಪನ್ಮೂಲ ಖಾತೆಯನ್ನು ಪ್ರಕಾಶ್ ಜಾವಡೇಕರ್ ಅವರಿಗೆ ವಹಿಸಲಾಗಿತ್ತು.

ವಿಶೇಷ ಆಹ್ವಾನಿತರಾಗಿ ಮುಖ್ತಾರ್ ಅಬ್ಬಾಸ್ ನಖ್ವೀ ಅವರನ್ನು ಸಮಿತಿಯಲ್ಲಿ ಸೇರಿಸಲಾಗಿದೆ. ಅದೇ ವೇಳೆ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಎಸ್ ಎಸ್ ಅಹ್ಲುವಾಲಿಯಾ, ರಾಜ್ಯ ಸಚಿವ ಪಿಪಿ ಚೌಧರಿ ಅವರನ್ನೂ ವಿಶೇಷ ಆಹ್ವಾನಿತರಾಗಿ ಸಮಿತಿಯಲ್ಲಿ ಸೇರ್ಪಡೆ ಮಾಡಲಾಗಿದೆ.

ಎನ್‍‌ಡಿಎ ಮಿತ್ರಪಕ್ಷದಿಂದ ರಾಮ ವಿಲಾಸ್ ಪಾಸ್ವಾನ್ ಅವರನ್ನು ಮಾತ್ರ ಈ ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ.

Comments are closed.