ಏನೇ ಮಾಡಿದರು ವಿಭಿನ್ನವಾಗಿ ಮಾಡುವ ಭಾರತ ಕ್ರಿಕೆಟ್ ತಂಡದ ನಾಯಕ ಈಗ ಭರ್ಜರಿಯಾಗಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಬಾರಿ ಧೋನಿ ಜೊತೆ ಒಂದೂವರೆ ವರ್ಷದ ಮಗಳು ಝಿವಾ ಕೂಡ ಸಾಥ್ ನೀಡಿದ್ದಾಳೆ. ಕೆಲದಿನಗಳ ಹಿಂದಷ್ಟೇ ಧೋನಿ ಸನ್’ಗ್ಲಾಸ್ ಹಾಕಿ ಎಲ್ಲರ ಗಮನಸೆಳೆದಿದ್ದರು. ಈಗ ದಾಡಿ ಬಿಟ್ಟುಕೊಂಡು ಮಗಳೊಂದಿಗೆ ಫೋಸ್ ನೀಡಿದ ಪೋಟೋವನ್ನು ತನ್ನ ಫೇಸ್’ಬುಕ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಆದರೆ ಗಡ್ಡ ಅಸಲಿಯೋ-ನಕಲಿಯೋ ಅವರೇ ಹೇಳಬೇಕು.
ಟೆಸ್ಟ್ ಕ್ರಿಕೆಟ್’ಗೆ ವಿದಾಯ ಹೇಳಿದ ನಂತರ ಹೆಚ್ಚಿನ ಸಮಯವನ್ನು ತನ್ನ ಕುಟುಂಬದೊಂದಿಗೆ ಕಳೆಯುತ್ತಿರುವ ಮಾಹಿ, ಈಗೀಗ ಹೊಸ ಹೊಸ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Comments are closed.