ಮನೋರಂಜನೆ

ಬಾಕ್ಸ್ ಆಫಿಸ್ ಕೊಳ್ಳೆಹೊಡೆಯುತ್ತಿದ್ದಾನೆ ‘ಸುಲ್ತಾನ್’

Pinterest LinkedIn Tumblr

sultan

ಬಹು ಕೋಟಿ ಗಳಿಕೆಯ ಸುಲ್ತಾನ್ ಚಿತ್ರ ಪ್ರಪಂಚದಾದ್ಯಂತ ದಾಖಲೆ ಬರೆದಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಐತಿಹಾಸಿಕ ಸಾಧನೆ ಮಾಡುತ್ತಿದೆ. ಸಲ್ಮಾನ್ ಖಾನ್ ಅಭಿನಯದ ಈ ಚಿತ್ರ ಮೊದಲ ವಾರಾಂತ್ಯದಲ್ಲೇ 200 ಕೋಟಿ ಗಳಿಸಿ ಹೆಚ್ಚು ಜನಪ್ರಿಯವಾಗಿದೆ.ಭಾರತದ 4500 ಕಡೆ ಹಾಗೂ ವಿಶ್ವದ 1100 ಕಡೆಗಳಲ್ಲಿ ಚಿತ್ರ ಬಿಡುಗಡೆಯಾಗಿರುವುದು ವಿಶೇಷ. ಒಂದು ಅಂದಾಜಿನ ಪ್ರಕಾರ ನಾಲ್ಕು ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ 58 ಕೋಟಿ ರೂ. ಗಳಿಸಿದೆ.

2015ರಲ್ಲಿ ಪಾಕಿಸ್ತಾನಿ ಚಿತ್ರ ಜವಾನಿ ಫಿಲ್ಮ್ ನಹಿ ಎಂಬ ಚಿತ್ರದ ನಂತರ ಈ ಚಿತ್ರ ಆ ದಾಖಲೆಯನ್ನು ಸರಿಗಟ್ಟುತ್ತಿದೆ. ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ಮಾಡುತ್ತಿರುವ ಈ ಚಿತ್ರ ಈಗಾಗಲೇ ನೂರರಷ್ಟು ಲಾಭ ಗಳಿಸಿ ಮುನ್ನುಗ್ಗುತ್ತಿದೆ. ಭಜರಂಗಿ ಭಾಯ್‍ಜಾನ್ ಚಿತ್ರದ ಆದಾಯದ ದಾಖಲೆಯನ್ನು ಮುರಿದು ಈ ಚಿತ್ರ ಮುನ್ನುಗ್ಗುತ್ತಿದೆ.

Comments are closed.