
ಬಾಲಿವುಡ್ ಹಿರಯ ನಟ ಅನಿಲ್ ಕಪೂರ್ ತಾರಾ ಪುತ್ರಿ ಸೋನಂ ಕಪೂರ್ ನಿಜಕ್ಕೂ ಎಲ್ಲರಂತೆ ಒಬ್ಬ ಸಾಮಾನ್ಯ ಹುಡುಗಿಯಿದ್ದಂತೆ ಎಂದೇ ಅನಿಸುತ್ತಿದೆಯಂತೆ.ಬಾಲಿವುಡ್ ನಟಿಯಾಗಿದ್ದರೂ ಅವಳಲ್ಲಿ ಯಾವುದೇ ರೀತಿಯ ಅಹಂಕಾರ, ಹಮ್ಮುಗಳಿಲ್ಲವಂತೆ. ತೀರ ಸಾದಾ ಸೀದಾ ಹುಡುಗಿ ನನ್ನ ಮಗಳು ಎಂಬುದು ಅನಿಲ್ ಕಪೂರ್‍ಗೆ ಹೆಮ್ಮೆಯಂತೆ.
ಸೋನಾ ನಿಜಕ್ಕೂ ಒಬ್ಬ ಸಾಮಾನ್ಯ ಹುಡುಗಿಯೇ ಸರಿ. ವಿನಯವಂತಿಕೆ ಅವಳ ಸ್ವಭಾವ, ಭಾವನಾತ್ಮಕವಾಗಿ ತುಂಬ ಸಾಫ್ಟ್ ಗರ್ಲ್ ಎನ್ನುತ್ತಾರೆ ಅನಿಲ್‍ಕಪೂರ್.ಇದೇ ವೇಳೆ ಅನಿಲ್ ಮಗ ಹರ್ಷವರ್ಧನ್ ಕೂಡ ಈಗಾಗಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನಂತೆ. ಹರ್ಷವರ್ಧನ್ ನಟಿಸುತ್ತಿರುವುದು ಖ್ಯಾತ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ ನಿರ್ಮಿಸುತ್ತಿರುವ `ಮಿರ್ಜಿಯಾ’ ಸಿನಿಮಾದಲ್ಲಿ. ನನ್ನ ಮಗ ಚೆನ್ನಾಗಿ ನಟಿಸುತ್ತಾನೆ ಎಂಬುದು ಅವರ ಭರವಸೆಯ ನುಡಿ. ನನ್ನ ಮಗ ಎಲ್ಲಿ ನಟನೆಯಲ್ಲಿ ವಿಫಲನಾಗುತ್ತಾನೋ ಎಂಬ ಭಯ ನನ್ನಲ್ಲಿಲ್ಲ ಎನ್ನುತ್ತಾರೆ ಅನಿಲ್ ಕಪೂರ್.
Comments are closed.