
ಹೈದರಾಬಾದ್: ಮನೆಯಲ್ಲಿ ಮಕ್ಕಳು ಆಟವಾಡುತ್ತಿರುವಾಗ ಅವರನ್ನ ಗಮನಿಸದೆ ಹೋದ್ರೆ ಎಂತಹ ಅಪಾಯವಾಗಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿ. 4 ವರ್ಷದ ಬಾಲಕನೊಬ್ಬ ಆಟವಾಡುತ್ತಿದ್ದ ವೇಳೆ ಮುಖಕ್ಕೆ ಬಿಗಿಯಾಗಿ ಪ್ಲಾಸ್ಟಿಕ್ ಕವರ್ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.
ಇಲ್ಲಿನ ನಿಜಾಮ್‍ಪೇಟ್‍ನ ಕುಕಟ್‍ಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 4 ವರ್ಷದ ಬಾಳಕ ಶ್ರಿಯಾನ್ ಮನೆಯಲ್ಲಿ ಆಟವಾಡ್ತಿದ್ದ ವೇಳೆ ಪ್ಲಾಸ್ಟಿಕ್ ಕವರನ್ನು ಮೂಗು ಮತ್ತು ಬಾಯಿ ಮುಚ್ಚುವಂತೆ ಬಿಗಿಯಾಗಿ ಕಟ್ಟಿಕೊಂಡಿದ್ದ. ಇದರ ಪರಿಣಾಮ ಆತನಿಗೆ ಉಸಿರಾಟದ ಸಮಸ್ಯೆಯುಂಟಾಗಿ ಪ್ಲಾಸ್ಟಿಕ್ ಕವರನ್ನು ಬಿಡಿಸಿಕೊಳ್ಳಲು ಯತ್ನಿಸಿ ಅದು ಮತ್ತಷ್ಟು ಬಿಗಿಯಾಗಿತ್ತು.
ಶ್ರಿಯಾನ್ ತಾಯಿ ಬಂದು ನೋಡಿದಾಗ ಬಾಲಕ ಪ್ರಜ್ಞೆ ತಪ್ಪಿದ್ದ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
Comments are closed.