ರಾಷ್ಟ್ರೀಯ

ತನಿಷಾ ಮುಖರ್ಜಿಗೆ ಬೇವಿನ ಮರ ಗಿಫ್ಟ್ ನೀಡಿದ ಅಣ್ಣಾ ಹಜಾರೆ

Pinterest LinkedIn Tumblr

tanishaದೆಹಲಿ: ಅಣ್ಣಾ ಹಜಾರೆ ಆತ್ಮಚರಿತ್ರೆ ಆಧಾರಿತ ‘ಅಣ್ಣಾ’ ಚಿತ್ರದಲ್ಲಿ ತನಿಷಾ ಮುಖರ್ಜಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ತನಿಷಾ ಪತ್ರಕರ್ತೆಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಗಾಂಧಿವಾದ ಮತ್ತು ಜನ ಲೋಕಪಾಲ್ ಮಸೂದೆ ಮಂಡನೆಗಾಗಿ ಅಮರಣಾಂತ ಉಪವಾಸ ಮಾಡಿ ದೇಶದಲ್ಲಿ ಹೊಸ ಸಂಚಲನ ಮೂಡಿಸಿರುವ ‘ಅಣ್ಣಾ’ ಹಜಾರೆ ಆತ್ಮಚರಿತ್ರೆ ಆಧಾರಿತ ಚಿತ್ರ ‘ಅಣ್ಣಾ’ ಚಿತ್ರ ತೆರೆ ಮೇಲೆ ಬರಲಿದೆ.

ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು ಇಡೀ ದೇಶದಲ್ಲಿ ಹೊಸ ಸಂಚಲನ ಮೂಡಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರ ‘ಅಣ್ಣಾ’ ಚಿತ್ರವನ್ನು ಶಂಶಾಕ್ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರವು ಮುಖ್ಯವಾಗಿ ರಾಜಕೀಯ ಕುರಿತಂತೆ ಬಿಂಬಿಸಲಿದೆ.ಈ ಹಿಂದೆ ತನುಷಾ ಖತರೋ ಕೀ ಕಿಲಾಡಿ ಶೋ ಒಂದರಲ್ಲಿ ಭಾಗಿಯಾಗಿದ್ದರು. ಅದಾದ ಬಳಿಕ ‘ಅಣ್ಣಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಎನ್‌ಜಿಓ ವೊಂದರ ಕೆಲಸಕ್ಕಾಗಿ ತನಿಷಾ ಕೊಡುಗೆಗಾಗಿ ಅಣ್ಣಾ ಹಜಾರೆ ಬೇವಿನ ಮರ ನೀಡಿದ್ದಾರೆ. ಈ ಚಿತ್ರವನ್ನು ಮನೀಂದ್ರ ಜೈನ್ ನಿರ್ಮಾಣ ಮಾಡಿದ್ದಾರೆ. ಮೊನ್ನೆ ಜೂನ್ 27ರಂದು ಚಿತ್ರದ ಪೋಟ್ಸರ್ ಕೂಡ ರಿಲೀಸ್ ಆಗಿತ್ತು.

ಅಣ್ಣಾ ಹಜಾರೆ ಬೇವಿನ ಮರಗಳನ್ನು ನೀಡಿರುವುದರ ಬಗ್ಗೆ ತನಿಷಾ ಶೇರ್ ಮಾಡಿದ್ದಾರೆ. ಸದ್ಯ ಅಣ್ಣಾ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿ ಇರುವ ತನಿಷಾ, ಅಣ್ಣಾ ಚಿತ್ರಕ್ಕಾಗಿ ತುಂಬಾ ಎಕ್ಸೈಟ್ ಆಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Comments are closed.