
ಸ್ಕೂಟರ್, ಬೈಕ್, ಲಾರಿ, ಕಾರು ಚಲಾಯಿಸುವುದು ಸುಲಭದ ಮಾತಲ್ಲ. ಎಷ್ಟೇ ಪರಿಣಿತ ಚಾಲಕರಾದರೂ ನಿದ್ದೆಗಣ್ಣಿನಲ್ಲೋ, ಕುಡಿದ ಅಮಲಿನಲ್ಲೋ ಚಾಲನೆ ಮಾಡಿ ಅಪಘಾತ ಮಾಡಿಯೇಬಿಡುತ್ತಾರೆ.
ವಾಹನ ಚಾಲನೆ ಸಮಯದಲ್ಲಿ ನಡೆಯುವ ಅಪಘಾತಗಳನ್ನು ತಡೆಗಟ್ಟಲು ಒಂದಿಲ್ಲೊಂದು ರೀತಿಯ ಅವಿಷ್ಕಾರಗಳು ನಡೆಯುತ್ತಲೇ ಇವೆ.
ಕಾರು ಚಾಲನೆ ಮಾಡುತ್ತಲೇ ಬಹುತೇಕ ಚಾಲಕರು ಮೆಸೇಜ್ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುವುದರಿಂದಲೇ ಅಪಘಾತಗಳು ಹೆಚ್ಚು ನಡೆಯುತ್ತವೆ ಎಂದು ಈಚಿನ ಅಮೆರಿಕದ ಸಮೀಕ್ಷಾ ವರದಿ ಹೇಳಿದೆ.
ಇಂತಹ ಸೆಲ್ ಫೋನ್‌ಗಳಿಂದ ಉಂಟಾಗುವ ಅಪಘಾತಗಳನ್ನು ನಿಯಂತ್ರಿಸಲು ದಿ ಸ್ಕಾಶೆ ಕಂಪನಿ ಸೆಲ್ ಫೋನ್‌ನಿಂದ ಸಾಧ್ಯವಿದೆ.
ಕಾರು ಚಲಿಸುವಾಗ ಇದು ತಾನೇ ತಾನಾಗಿ ಸೆಲ್ ಫೋನ್‌ನಿಂದ ಸಂದೇಶ ರವಾನೆಯಾಗುತ್ತದೆ. ಇದರಿಂದಾಗಿ ಸಹಜವಾಗಿಯೇ ಅಪಘಾತಗಳನ್ನು ತಡೆಯಬಹುದಾಗಿದೆ.
ಕಾರು ರಸ್ತೆ ಬದಿ ನಿಲ್ಲುತ್ತಿದ್ದಂತೆ ಸೆಲ್ ಫೋನ್ ಹಿಡಿತ ತನ್ನಿಂತಾನೆ ಸಡಿಲವಾಗುತ್ತದೆ. ಇದರಿಂದ ಅಪಘಾತವು ಸಂಭವಿಸದು.
ಕೊಬ್ರಾ ಐ ರಾಡಾರ್, ಐರ್‌ಯಾಡ್ 200 ಇದು ಲೇಸರ್ ಕಿರಣಗಳನ್ನು ಬಳಸಿ ಕಾರಿನ ಡ್ಯಾಷ್‌ಬೋರ್ಡ್ ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಚಾಲಕರಿಗೆ ಮನದಟ್ಟು ಮಾಡಿಕೊಡಲಿವೆ.
ಅಪಘಾತ ಸಂಭವಿಸಿದಾಗ ಬೇರೆಯವರಿಗೆ ಸಂದೇಶ ಮುಟ್ಟಿಸಲು ಕೂಡ ಇದನ್ನು ಬಳಸಬಹುದು. ಅಪಘಾತ ಸ್ಥಳವನ್ನು ಚಿತ್ರೀಕರಿಸುವ ಸಾಮರ್ಥ್ಯ ಕೂಡ ಇದೆ.
ಟಾಂಟಾಂ ಗೋ ಲೈವ್ 1535 ಎಂ ಉಪಕರಣ ಮತ್ತೊಂದು. ಇದು ವಾಹನಗಳ ವೇಗ ಟ್ರಾಫಿಕ್ ವರದಿ ಸ್ಥಳದ ಬಗ್ಗೆ ಮಾಹಿತಿ ಸಿಗಲಿದೆ.
ಐಯಾನ್ ರೋಡ್ ಆಗ್‌ಮೆಂಟೆಡ್ ಡ್ರೈವಿಂಗ್ ಪ್ರೊ ಇದೂ ಕೂಡ ಫೋನ್‌ನಲ್ಲಿರುವ ವಿಡಿಯೋ ಕ್ಯಾಮರಾ ಸ್ಟ್ರೀಮ್, ಜಿಪಿಎಸ್ ವ್ಯವಸ್ಥೆ ಬಳಸಿಕೊಂಡು ವಾಹನ ಚಲಿಸುತ್ತಿರುವ ಪ್ರದೇಶದ ಮಾಹಿತಿಯನ್ನು ಇದು ಒದಗಿಸುತ್ತದೆ.
ಅಲ್ಲದೆ ಒಂದು ವಾಹನ ಬೇರೊಂದು ವಾಹನಕ್ಕೆ ಎಷ್ಟು ಹತ್ತಿರವಿದೆ ಎಂಬ ಬಗ್ಗೆ ವಿಡಿಯೋದಲ್ಲಿ ಕೆಂಪು ದೀಪ ಬಳಸಿ ಎಚ್ಚರಿಕೆಯನ್ನು ನೀಡುತ್ತದೆ.
ಸಾಧಾರಣ ಅಂತರದಲ್ಲಿದ್ದರೆ ಹಳದಿ ಬೆಳಕು ಹಾಗೂ ಸುರಕ್ಷಿತ ಅಂತರದಲ್ಲಿದ್ದರೆ ಹಸಿರು ಬೆಳಕು ಗೋಚರಿಸುತ್ತದೆ.
ಈಚೆಗೆ ಚಾಲಕರನ್ನು ಗಮನದಲ್ಲಿಟ್ಟುಕೊಂಡು ವಾಹನಗಳಲ್ಲಿ ಸುಧಾರಿತ ಸುರಕ್ಷಣಾ ಉಪಕರಣಗಳನ್ನು ಅಳವಡಿಸಲಾಗಿರುತ್ತದೆ. ಇವುಗಳಿಂದ ಮಾರ್ಗ ಕುರಿತ ಮಾಹಿತಿ ವಿವರ, ದುರಂತದ ವಿವರ ಪಡೆಯಲು ಸಾಧ್ಯ.
Comments are closed.