ಮನೋರಂಜನೆ

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ದಾಖಲೆ ಮುರಿದ ಧೋನಿ

Pinterest LinkedIn Tumblr

ms-dhoni-and-ricky-ponting

ನವದೆಹಲಿ: ಐಸಿಸಿ ನಡೆಸುವ ಎಲ್ಲ ಮಾದರಿಯ ಸರಣಿಗಳನ್ನ ಗೆಲ್ಲುವ ಮೂಲಕ ಭಾರತದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ 324 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಾಯಕತ್ವ ವಹಿಸಿರುವ ರಿಕ್ಕಿ ಪಾಂಟಿಂಗ್ ದಾಖಲೆಯನ್ನು ಸಮಗೊಳಿಸಿದ್ದಾರೆ.

ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ಮೂರು ಏಕದಿನ ಪಂದ್ಯಗಳು ಗೆದ್ದು ವೈಟ್ ವಾಷ್ ಮಾಡಿದೆ ಹಾಗೇ 2-1 ಟಿ20 ಪಂದ್ಯಗಳನ್ನು ಗೆಲ್ಲುವ ಮೂಲಕ ಧೋನಿ ಈ ಸಾಧನೆಯನ್ನು ಮಾಡಿದ್ದು, ಆಸ್ಟ್ರೇಲಿಯಾದ ಮಾಜಿ ನಾಯಕ ಪಾಟಿಂಗ್ ದಾಖಲೆಯನ್ನ ಸರಿಗಟ್ಟಿದ್ದಾರೆ.

2007ರಲ್ಲಿ ನಾಯಕರಾಗಿ ನೇಮಕವಾಗಿದ್ದ ಧೋನಿ 60 ಟೆಸ್ಟ್‍ಗಳು, 194 ಏಕದಿನ ಪಂದ್ಯಗಳು, 70 ಟಿ20ಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ ಈ ಸಾಧನೆಯನ್ನು ಮಾಡಿದ್ದಾರೆ. 34 ವರ್ಷದ ಧೋನಿ ಕ್ರಿಕೆಟ್‍ನಲ್ಲಿ ಅತ್ಯಂತ ಯಶಸ್ವಿ ನಾಯಕರಾಗಿದ್ದು 27 ಟೆಸ್ಟ್, 107 ಏಕದಿನ ಮತ್ತು 40 ಟಿ20 ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ವಿಶ್ವ ಟಿ20 ವಿಶ್ವಕಪ್, (2007), ವಿಶ್ವಕಪ್(2011) ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ (2013) ಭಾರತವನ್ನು ಗೆಲವು ಕಂಡಿದ್ದಾರೆ ಹಾಗೂ ಐಸಿಸಿ ಟೆಸ್ಟ್ ಕ್ರಮಾಂಕದಲ್ಲಿ ಅಗ್ರಸ್ಥಾನಕ್ಕೆ ತಂದಿದ್ದಾರೆ.

ಎಂಎಸ್ ಧೋನಿ ಈಗ ಏಕದಿನ ಮತ್ತು ಟಿ20 ಕ್ರಿಕೆಟ್‍ನಲ್ಲಿ ಮಾತ್ರ ಆಡುತ್ತಿದ್ದು, ಆಸ್ಟ್ರೇಲಿಯಾ ಪ್ರವಾಸ ವೇಳೆ ಟೆಸ್ಟ್ ಕ್ರಿಕೆಟ್‍ಗೆ ನಿವೃತ್ತಿಯನ್ನು ಹೇಳಿದ್ದರು.

Comments are closed.