ಮಸ್ಕಿ: 30 ಸಾವಿರ ಜನಸಂಖ್ಯೆಗೆ ಕುಡಿಯುವ ನೀರು ಪೂರೈಸುವ ಇಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ ಕೆರೆಯಲ್ಲಿ ನೀರಿನ ಪ್ರಮಾಣ ಗುರುವಾರ 3 ಅಡಿಗೆ ಕುಸಿದಿದೆ. ನೀರಿನ ಸಮಸ್ಯೆ ಪುರಸಭೆ ಆಡಳಿತ ಮಂಡಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸದ್ಯ ಕೆರೆಯಲ್ಲಿ ಸಂಗ್ರಹ ಇರುವ ನೀರು 8 ರಿಂದ 10 ದಿನಕ್ಕೆ ಮಾತ್ರ ಸಾಕಾಗುತ್ತದೆ. ಈಗಾಗಲೇ ಮೂರು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ನೀರು ಸಂಪೂರ್ಣ ಬತ್ತಿ ಹೋದ ನಂತರ ನೀರಿನ ಅಭಾವ ಉಲ್ಬಣಗೊಳ್ಳಲಿದೆ.
ಪುರಸಭೆ ಆಡಳಿತ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕೊಳವೆಬಾವಿ ಕೊರೆಸಲು ಮುಂದಾಗಿದೆ. ಖಾಸಗಿ ವ್ಯಕ್ತಿಗಳ ಕೊಳವೆಬಾಯಿ ನೀರು ಪಡೆಯುವ ಸಂಬಂಧ ಯೋಚಿಸಲಾಗುತ್ತಿದೆ ಎಂದು ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ ತಿಳಿಸಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆ ನೀರು ಬರುವವರೆಗೆ ನೀರಿನ ಅಭಾವ ಇದ್ದು ಅವಶ್ಯವಿದ್ದ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನೀರಿನ ಅಭಾವ ಎದುರಿಸಲು ಪುರಸಭೆ ಆಡಳಿತ ಮಂಡಳಿ ಎಲ್ಲಾ ಮುಂಜಾಗೃತ ಕ್ರಮ ಕೈಗೊಂಡಿದೆ.
-ರಡ್ಡಿ ರಾಯನಗೌಡ, ಮುಖ್ಯಾಧಿಕಾರಿ ಪುರಸಭೆ ಮಸ್ಕಿ
Comments are closed.