ರಾಷ್ಟ್ರೀಯ

ಅಯ್ಯೊ ದೇವ್ರೆ! ಹಾರರ್ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ವ್ಯಕ್ತಿ ಸಾವು!

Pinterest LinkedIn Tumblr

Watching-Horrorತಿರುವಣ್ಣಾಮಲೈ: 65 ವರ್ಷದ ವ್ಯಕ್ತಿಯೊಬ್ಬರು ಚಿತ್ರ ಮಂದಿರದಲ್ಲಿ ಹಾರರ್ ಸಿನಿಮಾ ಕ್ಲೈಮ್ಯಾಕ್ಸ್ ವೀಕ್ಷಿಸುತ್ತಿದ್ದ ಸಂದರ್ಭದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ನಗರದಲ್ಲಿ ಗುರುವಾರ ರಾತ್ರಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಪೊಲೀಸರ ಹೇಳಿಕೆ ಪ್ರಕಾರ, ಆಂಧ್ರಪ್ರದೇಶ ನಿವಾಸಿಗಳಾದ ಇಬ್ಬರು ಇತ್ತೀಚೆಗಷ್ಟೇ ತೆರೆಕಂಡಿದ್ದ ಹಾಲಿವುಡ್ ಹಾರರ್ ಸಿನಿಮಾ (The Conjuring 2)ದ ಶೋ ವೀಕ್ಷಿಸಲು ರಾತ್ರಿ ನಗರದ ಬಾಲಸುಬ್ರಮಣ್ಯಯರ್ ಥಿಯೇಟರ್ ಗೆ ತೆರಳಿದ್ದರು.

ಸಿನಿಮಾ ವೀಕ್ಷಿಸುತ್ತಿದ್ದು…ಕ್ಲೈಮ್ಯಾಕ್ಸ್ ಸಂದರ್ಭದಲ್ಲಿಯೇ ಅದರಲ್ಲೊಬ್ಬ ವ್ಯಕ್ತಿ ಎದೆನೋವಿನಿಂದ ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ವ್ಯಕ್ತಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದರು ಎಂದು ವರದಿ ವಿವರಿಸಿದೆ.

ಈ ವ್ಯಕ್ತಿಯ ಗುರುತು ಪತ್ತೆಗಾಗಿ ನಗರದ ರಿಕ್ಷಾ ಚಾಲಕರು, ಲಾಡ್ಜ್ ಗಳ ಮಾಲೀಕರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಾವನ್ನಪ್ಪಿರುವ ವ್ಯಕ್ತಿಯ ಜೊತೆಗಿದ್ದಾತನಿಗೂ ಆತನ ವಿಳಾಸ, ಪರಿಚಯ ತಿಳಿದಿಲ್ಲ. ತನಗೆ ಆತ ಹೊರಗೆ ಪರಿಚತನಾಗಿದ್ದ ಎಂದು ಪೊಲೀಸರಿಗೆ ವಿವರಣೆ ನೀಡಿದ್ದಾನೆ ಎಂದು ವರದಿ ಹೇಳಿದೆ.
-ಉದಯವಾಣಿ

Comments are closed.