ರಾಷ್ಟ್ರೀಯ

ಮಂಗನನ್ನು ತಿನ್ನುವಲ್ಲಿ ತಪ್ಪಿಬಿದ್ದು “ಇಂಗು ತಿಂದ ಮಂಗ’ನಾದ ಹುಲಿ

Pinterest LinkedIn Tumblr

Monkey-tiger-700ಹೊಸದಿಲ್ಲಿ : ಮಂಗನನ್ನು ತಿಂದು ಮುಗಿಸುವ ಆಸೆಯಲ್ಲಿ ಮರವೇರಿದ ಬಲಿಷ್ಠ ಹುಲಿರಾಯನಿಗೆ ಕುಟಿಲೋಪಾಯಗಳ ಮಂಗನು ಆಹಾರವಾಗುವ ಬದಲು ಹುಲಿಯನ್ನೇ ಬೇಸ್ತುಗೊಳಿಸಿ ನೆಲಕ್ಕೆ ಬೀಳಿಸಿದ ರೋಮಾಂಚಕ ದೃಶ್ಯವೊಂದು ವಿಡಿಯೋದಲ್ಲಿ ದಾಖಲಾಗಿದ್ದು ಅದೀಗ ಸಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಮೈನವಿರೇಳಿಸುವ ಈ ಅತ್ಯಂತ ರೋಚಕ ಘಟನೆ ನಡೆದದ್ದು ಇಲ್ಲಿನ ಜಿಮ್‌ ಕಾರ್ಬೆಟ್‌ ನ್ಯಾಶನಲ್‌ ಪಾರ್ಕ್‌ನಲ್ಲಿ.

ವಿಡಿಯೋದಲ್ಲಿ ಕಂಡು ಬರುವಂತೆ ಮಂಗವೊಂದು ಮರದ ಮೇಲೆ ಕುಳಿತಿದೆ. ಅದನ್ನು ತಿನ್ನುವಾಸೆಯಲ್ಲಿ ಹುಲಿಯೊಂದು ಅದೇ ಮರವನ್ನೇರಿದೆ. ಆದರೆ ಮರದ ಗೆಲ್ಲುಗಳ ನಡುವೆ ತನ್ನನ್ನು ತಾನು ರಕ್ಷಿಸಿಕೊಂಡಿರುವ ಮಂಗನನ್ನು ಹಿಡಿಯುವುದು ಹೇಗೆಂದು ಗೊತ್ತಾಗದೆ ಹುಲಿ ಚಡಪಡಿಸುತ್ತಿದೆ.

ಇನ್ನೇನು ಹುಲಿ ಮಂಗನನ್ನು ಹಿಡಿದೇ ಬಿಟ್ಟಿತು ಎನ್ನುವಾಗ ಮಂಗ ತನ್ನ ಚತುರೋಪಾಯದಿಂದ ತಾನಿದ್ದ ಗೆಲ್ಲಿನಿಂದ ಕೆಳಗಿನ ಜಿಗಿಯುತ್ತದೆ. ಮಂಗನನ್ನು ಹಿಡಿವ ಲೆಕ್ಕಾಚಾರದಲ್ಲಿ ತಪ್ಪಿಬಿದ್ದ ಹುಲಿ ಕೊನೆಗೆ ಮರದಿಂದ ಕೆಳಗೆ ಬಿದ್ದು ಮೈಯೆಲ್ಲಾ ಪೆಟ್ಟುಮಾಡಿಕೊಂಡು ಇಂಗು ತಿಂದ ಮಂಗ’ನಾಗಿ ಬಿಡುತ್ತದೆ !
-ಉದಯವಾಣಿ

Comments are closed.