ರಾಷ್ಟ್ರೀಯ

ಭ್ರೂಣ ಹತ್ಯೆ ವಿರುದ್ಧ ದೇವ್‍ಬಂದ್ ದಾರುಲ್ ಉಲೂಂ ಫತ್ವಾ

Pinterest LinkedIn Tumblr

Deobandಲಕ್ನೋ (ಪಿಟಿಐ): ಹೆಣ್ಣು ಭ್ರೂಣ ಹತ್ಯೆ ಇಸ್ಲಾಂ ವಿರುದ್ಧ ಮತ್ತು ಕಾನೂನು ವಿರುದ್ಧವಾದುದು ಎಂದು ಹೇಳಿರುವ ದೇವ್‍ಬಂದ್ ದಾರುಲ್ ಉಲೂಂ ಭ್ರೂಣ ಹತ್ಯೆ ವಿರುದ್ಧ ಫತ್ವಾ ಹೊರಡಿಸಿದೆ.

ಈ ಫತ್ವಾ ಹೊರಡಿಸಿರುವ ದಾರುಲ್ ಉಲೂಂನ ದಾರುಲ್ ಇಫ್ತಾ ವಿಭಾಗವು ಲಿಂಗ ತಾರತಮ್ಯ ಮಾಡಿ ಗರ್ಭಪಾತ ಮಾಡಿಸುವುದರ ವಿರುದ್ಧ ಇಸ್ಲಾಂ/ ಖುರಾನ್/ ಹಾದಿತ್ ನಲ್ಲಿ ಏನು ಉಲ್ಲೇಖಿಸಲಾಗಿದೆ ಎಂಬುದರ ಬಗ್ಗೆ ವಿವರಣೆ ನೀಡಿದೆ.

ಮುಸ್ಲಿಂ ಸಮುದಾಯದಲ್ಲಿ ಹೆಣ್ಣು ಮಕ್ಕಳ ಅನುಪಾತದಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಫತ್ವಾ ಹೊರಡಿಸಲಾಗಿದೆ.

Comments are closed.