ಮನೋರಂಜನೆ

ಪಾಕಿಸ್ತಾನದ 2 ಸಿನೆಮಾಗಳಲ್ಲಿ ನಟಿಸಲು ವಿದ್ಯಾ ಬಾಲನ್ ಗೆ ಆಹ್ವಾನ

Pinterest LinkedIn Tumblr

vidya-balan

ಮುಂಬೈ: ಪ್ರಾದೇಶಿಕ ಸಿನೆಮಾಗಳಲ್ಲಿ ನಟಿಸಲು ಮುಂದಾಗಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ವಿದ್ಯಾ ಬಾಲನ್ ಅವರಿಗೆ ಎರಡು ಪಾಕಿಸ್ತಾನಿ ಸಿನೆಮಾಗಳಲ್ಲಿ ನಟಿಸಲು ಅವಕಾಶ ಬಂದಿದೆಯಂತೆ.

ನಿಮಗೆ ಪಾಕಿಸ್ತಾನಿ ಸಿನೆಮಾಗಳಲ್ಲಿ ನಟಿಸುವ ಅವಕಾಶ ಬಂದಿದೆಯೇ ಎಂಬ ಪ್ರಶ್ನೆಗೆ “ಇತ್ತೀಚೆಗಷ್ಟೇ ಎರಡು ಅವಕಾಶ ಬಂದಿದೆ. ನಟಿಸುವುದು ಸ್ಕ್ರಿಪ್ಟ್ ಮೇಲೆ ಅವಲಂಬಿತವಾಗಿದೆ. ಪಾಕಿಸ್ತಾನಿ ಸಿನೆಮಾ ‘ಬೋಲ್’ ನೋಡಿದ್ದೇನೆ ಮತ್ತು ಮೆಚ್ಚಿದ್ದೇನೆ. ‘ಕಾಮೋಶ್ ಪಾನಿ’ ಇನ್ನೂ ನೋಡಿಲ್ಲ ಆದರೆ ಒಳ್ಳೆಯ ಸಿನೆಮಾ ಎಂದು ಕೇಳಿದ್ದೇನೆ. ವಿಶ್ವದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ನಾನು ಸಿದ್ಧನಿದ್ದೇನೆ” ಎಂದು ಅವರು ವಿವರಿಸುತ್ತಾರೆ.

ಸ್ಕ್ರಿಪ್ಟ್ ಗಳನ್ನು ಓದಿದ್ದೀರಾ ಎಂಬ ಪ್ರಶ್ನೆಗೆ “ಅವರನ್ನು ಇನ್ನೂ ಭೇಟಿಯಾಗಿಲ್ಲ. ಇಬ್ಬರು ಕರೆ ಮಾಡಿ ಕಥೆ ಹೇಳಲು ಆಸಕ್ತಿ ತೋರಿದ್ದಾರೆ” ಎಂದು ಅವರು ಹೇಳಿದ್ದಾರೆ.

Comments are closed.