ರಾಷ್ಟ್ರೀಯ

ದರೋಡೆಕೋರನ ಬೆನ್ನಟ್ಟಿ ಹಿಡಿದ ಹುಡುಗಿ; ಚಾಕು ತಿವಿದರೂ ಜಗ್ಗದ ಧೀರೆ

Pinterest LinkedIn Tumblr

2

ನವದೆಹಲಿ: ಅಪಾರ್ಟ್‍ಮೆಂಟ್‍ವೊಂದರಲ್ಲಿ ಮೂರ್ನಾಲ್ಕು ಮನೆಗಳ ಬಾಗಿಲು ಮುರಿದು ನಗ-ನಾಣ್ಯ ದೋಚಿ ಪರಾರಿಯಾಗುತ್ತಿದ್ದ ದರೋಡೆಕೋರರನ್ನು ಬೆನ್ನಟ್ಟಿ ಹೋದ 18ರ ಹರೆಯದ ಕರಾಟೆ ಪಟುವೊಬ್ಬಳು ತನ್ನ ಕೈಗೆ ಚಾಕು ಹಾಕಿದರೂ ಅಂಜದೆ ಒಬ್ಬ ದರೋಡೆಕೋರನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

ಮಾರ್ಷಲ್ ಕಲೆಯಲ್ಲಿ ಬ್ಲಾಕ್‍ಬೆಲ್ಟ್ ಆಗಿರುವ ಪ್ರಿಯಾಂಕಾ, ಉತ್ತರ ದೆಹಲಿಯ ಪಾಂಡವಪುರದಲ್ಲಿನ ತನ್ನ ಅಜ್ಜಿ ಮನೆಗೆ ಬಂದಿದ್ದಳು. ಮನೆಯ ಹೊರಗೆ ಕುಳಿತಿದ್ದ ಅವಳಿಗೆ ಅಕ್ಕಪಕ್ಕದ ಮನೆಗಳಲ್ಲಿ ಕಳ್ಳರು, ಕಳ್ಳರು ಎಂದು ಕೂಗಾಡಿದ್ದು ಕೇಳಿದೆ. ತಕ್ಷಣ ಒಳಕ್ಕೆ ಹೋದಾಗ ದರೋಡೆಕೋರರು ಓಡಿ ಹೋಗುತ್ತಿದ್ದಾರೆ.

ಇವರಲ್ಲಿ ಒಬ್ಬನನ್ನಾದರೂ ಹಿಡಿಯಲೇಬೇಕು ಎಂದು ಸಂಕಲ್ಪ ಮಾಡಿದ ಪ್ರಿಯಾಂಕಾ, ಸುಮಾರು 200 ಮೀಟರ್‍ನಷ್ಟು ದೂರ ಅವರನ್ನು ಬೆನ್ನಟ್ಟಿ ಒಬ್ಬನನ್ನು ಕತ್ತಿನ ಬಳಿ ಹಿಡಿದಿದ್ದಾಳೆ. ಕಳ್ಳ ಅವಳ ಎಡಗೈಗೆ ಚಾಕುವಿನಿಂದ ತಿವಿದಿದ್ದಾನೆ. ಆದರೆ, ಅದಕ್ಕೆ ಕೇರ್ ಮಾಡದ ಪ್ರಿಯಾಂಕಾ ಅವನೊಂದಿಗೆ ಹೋರಾಡಿ ಹಿಡಿದು ಸಾರ್ವಜನಿಕರ ವಶಕ್ಕೆ ನೀಡಿದ್ದಾಳೆ. ಬಳಿಕ ಅವನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಉಳಿದವರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಇತ್ತೀಚೆಗಷ್ಟೆ ಪ್ರೌಢಶಿಕ್ಷಣ ಮುಗಿಸಿರುವ ಪ್ರಿಯಾಂಕಾಗೆ ಮೊದಲಿನಿಂದಲೂ ಸೇನೆ ಅಥವಾ ಪೆÇಲೀಸ್ ಇಲಾಖೆಗೆ ಸೇರುವಾಸೆ. ಅದಕ್ಕೆಂದೇ ಕರಾಟೆ ಕಲಿತಿದ್ದಾಳೆ. ಸದ್ಯ ಪೊಲೀಸ್ ಇಲಾಖೆಯ ಪರೀಕ್ಷೆಗೆ ತಯಾರಿ ನಡೆಸಿದ್ದಾಳೆ. ದೆಹಲಿಯ ಭಜನ್‍ಪುರ ನಿವಾಸಿಯಾಗಿರುವ ಪ್ರಿಯಾಂಕಾಳ ತಂದೆ ಶಾಂಘೈ ಮೂಲದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

Comments are closed.