ಮನೋರಂಜನೆ

ಮೊದಲ ಮಗುವಿನ ನಿರೀಕ್ಷೆಯಲ್ಲಿ ಹರ್ಭಜನ್ ಸಿಂಗ್; ಹೊಸ ಅತಿಥಿ ಸ್ವಾಗತಕ್ಕೆ ದಂಪತಿ ಸಕಲ ಸಿದ್ಧತೆ

Pinterest LinkedIn Tumblr

harbhajan

ನವದೆಹಲಿ: ಕ್ರಿಕೆಟರ್ ಹರ್ಭಜನ್ ಸಿಂಗ್ ನಟಿ ಗೀತಾ ಬಸ್ರಾ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜುಲೈನಲ್ಲಿ ಬರಲಿರುವ ತಮ್ಮ ಕಂದನ ಸ್ವಾಗತಕ್ಕೆ ದಂಪತಿ ಸಕಲ ಸಿದ್ಧತೆ ನಡೆಸಿದ್ದಾರೆ.

ಹೌದು. ಜುಲೈನಲ್ಲಿ ಭಜ್ಜಿ ತಮ್ಮ ಮಗುವನ್ನು ಸ್ವಾಗತಿಸಲಿದ್ದಾರೆ. ಸದ್ಯ ಗರ್ಭಿಣಿ ಗೀತಾ ಬಸ್ರಾ ತಮ್ಮ ಕುಟುಂಬದೊಂದಿಗೆ ಲಂಡನ್‍ನಲ್ಲಿದ್ದು, ಜೂನ್ 4 ರಂದು ಅಲ್ಲೇ ಸೀಮಂತ ಕಾರ್ಯಕ್ರಮಕ್ಕೆ ಮಾಡಲಿದ್ದಾರೆ. ಆದ್ರೆ ಈ ಕಾರ್ಯಕ್ರಮದಲ್ಲಿ ಭಜ್ಜಿ ಭಾಗವಹಿಸುತ್ತಿಲ್ಲ ಎನ್ನಲಾಗಿದೆ.

ಹರ್ಭಜನ್ ಸಿಂಗ್ ಹಾಗೂ ಗೀತಾ ಬಸ್ರಾ 5 ವರ್ಷಗಳ ಕಾಲ ಪ್ರೀತಿಸಿ ನಂತರ ಅಕ್ಟೋಬರ್ 2015ರಲ್ಲಿ ವಿವಾಹವಾಗಿದ್ದರು. ಈ ಬಾರಿಯ ಐಪಿಎಲ್ ಉದ್ಘಾಟನೆ ಸಮಾರಂಭದಲ್ಲಿ ಗೀತಾ ಗರ್ಭಿಣಿ ಎನ್ನುವುದು ದೃಢಪಟ್ಟಿತ್ತು. ಸದ್ಯ ಲಂಡನ್‍ನಲ್ಲೇ ಮಗುವನ್ನು ಸ್ವಾಗತಿಸುವ ಗೀತಾ ಅಕ್ಟೋಬರ್‍ಗೆ ಭಾರತಕ್ಕೆ ಬರಲಿದ್ದಾರೆ.

Comments are closed.