ರಾಷ್ಟ್ರೀಯ

ದೆಹಲಿ, ಬೆಂಗಳೂರು, ಮುಂಬೈ ನಿಜಕ್ಕೂ ಸ್ಮಾರ್ಟ್ ಸಿಟಿಗಳಲ್ಲ: ಸಮೀಕ್ಷೆ

Pinterest LinkedIn Tumblr

smartcityನವದೆಹಲಿ: ನರೇಂದ್ರ ಮೋದಿ ಸರ್ಕಾರ ದೇಶಾದ್ಯಂತ ಹಲವು ನಗರಗಳನ್ನು ಸ್ಮಾರ್ಟ್ ಸಿಟಿಗಳನ್ನಾಗಿ ಅಭಿವೃದ್ಧಿ ಮಾಡಲು ಯತ್ನಿಸುತ್ತಿದೆ. ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿ, ವಾಣಿಜ್ಯ ನಗರಿ ಮುಂಬೈ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರು ನಿಜಕ್ಕೂ ಸ್ಮಾರ್ಟ್ ಸಿಟಿಗಳಲ್ಲ ಎಂದು ವಾಸಯೋಗ್ಯ ನಗರಗಳ ಜಾಗತಿಕ ಸಮೀಕ್ಷಾ ವರದಿ ಹೇಳಿದೆ.
2016ರ ಸಿಟೀಸ್ ಇನ್ ಮೋಷನ್ ಇಂಡೆಕ್ಸ್ (ಸಿಐಎಂಐ), ಬಾರ್ಸಿಲೋನಾದಲ್ಲಿರುವ ನವರ್ರರಾ ವಿಶ್ವವಿದ್ಯಾಲಯ ಮತ್ತು ಸೆಂಟರ್ ಫಾರ್ ಗ್ಲೋಬಲೈಸೇಷನ್ ಆಂಡ್ ಸ್ಟ್ರೆಟರ್ಜಿ ಜಂಟಿಯಾಗಿ ಸಮೀಕ್ಷಾ ವರದಿಯನ್ನು ಸಿದ್ಧ ಪಡಿಸಿದ್ದು, ಈ ಪಟ್ಟಿಯಲ್ಲಿ ಭಾರತದ ಪ್ರಮುಖ ನಾಲ್ಕು ನಗರಗಳು ಅತಿ ಕಡಿಮೆ ಅಂಕ ಪಡೆದಿವೆ.
ಭಾರತದ ದೆಹಲಿ, ಬೆಂಗಳೂರು, ಮುಂಬೈ ಹಾಗೂ ಕೋಲ್ಕತಾ ಸೇರಿದಂತೆ ಒಟ್ಟು 181 ನಗರಗಳನ್ನು ಸಮೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ ಅಮೆರಿಕದ ನ್ಯೂಯಾರ್ಕ್ ಮೊದಲ ಸ್ಥಾನ ಪಡೆದಿದ್ದರೆ, ಲಂಡನ್, ಪ್ಯಾರಿಸ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೋಸ್ಟನ್ ನಂತರದ ಸ್ಥಾನ ಪಡೆದು, ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿವೆ.
ಈ ಪಟ್ಟಿಯಲ್ಲಿ ದೆಹಲಿ 174ನೇ ಸ್ಥಾನ, ಬೆಂಗಳೂರು 176ನೇ ಸ್ಥಾನ, ಕೋಲ್ಕತ 179ನೇ ಸ್ಥಾನ ಪಡೆದಿವೆ. ಮುಂಬೈ 167ನೇ ಸ್ಥಾನ ಪಡೆದಿದೆ. ನೈಜೀರಿಯಾದ ಲಾಗೋಸ್ ನಗರ 180ನೇ ಸ್ಥಾನ ಪಡೆದಿದ್ದರೆ, ಕರಾಚಿ 181ನೇ ಸ್ಥಾನ ಪಡೆದಿದೆ.
ಆರ್ಥಿಕತೆ, ಜನಸಂಖ್ಯೆ, ತಂತ್ರಜ್ಞಾನ, ಪರಿಸರ, ಅಂತಾರಾಷ್ಟ್ರೀಯ ಸಂಪರ್ಕ, ಆಡಳಿತ, ನಗರ ಯೋಜನೆ, ನಾಗರಿಕರ ನಿರ್ವಹಣೆ, ಸಾಮಾಜಿಕ ಒಗ್ಗಟ್ಟು, ನಗರದ ಚಲನ ಶೀಲತೆ (ಮೊಬಿಲಿಟಿ) ಮತ್ತು ರಸ್ತೆ ಹಾಗೂ ಸಂಪರ್ಕ ವ್ಯವಸ್ಥೆ ಸೇರಿದಂತೆ ಹತ್ತು ಅಂಶಗಳ ಆಧಾರದ ಮೇಲೆ ಸಮೀಕ್ಷೆ ನಡೆಸಲಾಗಿದೆ.

Comments are closed.