ರಾಷ್ಟ್ರೀಯ

ತಾಜ್ ಮಹಲ್ ನ್ನು ಹಾಳು ಮಾಡುತ್ತಿವೆ ಕ್ರಿಮಿಕೀಟಗಳು

Pinterest LinkedIn Tumblr

taj-mahal in bangalore

ನವದೆಹಲಿ, ಮೇ 25- ವಿಶ್ವದ ಅದ್ಭುತಗಳಲ್ಲೊಂದಾದ ತಾಜ್ ಮಹಲ್ ಇತ್ತೀಚಿನ ದಿನಗಳಲ್ಲಿ ಕೀಟಗಳಿಂದ ಬಾಧಿತವಾಗಿದ್ದು, ಹತ್ತಿರದಲ್ಲಿಯೇ ಹರಿಯುತ್ತಿರವ ಯಮುನಾ ನದಿ ಮಲಿನಗೊಂಡಿರುವುದರಿಂದ ಅದರಲ್ಲಿರುವ ಕ್ರಿಮಿಕೀಟಗಳು ಈ ಪ್ರೇಮ ಸ್ಮಾರಕವನ್ನು ಹಾಳುಗೆಡಹುತ್ತಿವೆ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಇದರಿಂದಾಗಿ ತಾಜ್ ಮಹಲ್ ಕಟ್ಟಡದ ಅಮೃತಶಿಲೆಯಲ್ಲಿ ಅಲ್ಲಲ್ಲಿ ಹಳದಿ ಬಣ್ಣಗಳು ಕಾಣಿಸುತ್ತಿವೆ. 17ನೇ ಶತಮಾನದ ಈ ಸ್ಮಾರಕ ಹಲವಾರು ವರ್ಷಗಳಿಂದ ಮಾಲಿನ್ಯ, ಕಟ್ಟಡ ನಿರ್ಮಾಣ ಚಟುವಟಿಕೆಗಳು, ಹತ್ತಿರದಲ್ಲಿಯೇ ಇರುವ ರುದ್ರಭೂಮಿಯಿಂದ ಬಾಧಿತವಾಗಿದೆ.

ಬಿಬಿಸಿ ವರದಿಯೊಂದು ತಾಜ್ ಮಹಲ್ ಹಿಂದೆ ಎದುರಿಸುತ್ತಿದ್ದ ಹಾಗೂ ಈಗ ಎದುರಿಸುತ್ತಿರುವ ಅಪಾಯಗಳನ್ನು ತನ್ನ ವರದಿಯೊಂದರಲ್ಲಿ ವಿವರಿಸಿದೆ. ಪರಿಸರವಾದಿ ಡಿ.ಕೆ.ಜೋಷಿಯವರ ಪ್ರಕಾರ ಚಿರೊನೊಮಸ್ ಕ್ಯಾಲ್ಲಿಗ್ರಾಫಸ್ ಎಂಬ ಹೆಸರಿನ ಕೀಟ ಬಾಧೆಯಿಂದ ತಾಜ್ ಮಹಲ್ ಕಟ್ಟಡದ ಬಣ್ಣ ಅಲ್ಲಲ್ಲಿ ಹಳದಿಯಾಗುತ್ತಿದೆ ಎಂದಿದ್ದಾರೆ.

ಈ ವಿಚಾರವಾಗಿ ಈಗಾಗಲೇ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಿದ್ದು, ಮಲಿನಗೊಂಡಿರುವ ಯಮುನಾ ನದಿಯಲ್ಲಿ ಸ್ಫೋಟಕ ಮಾದರಿಯಲ್ಲಿ ಬೆಳೆಯುತ್ತಿರುವ ಕೀಟಗಳು ತಾಜ್ ಮಹಲ್ ಅಂದಗೆಡಿಸುತ್ತಿವೆಯೆಂದು ದೂರಿದ್ದಾರೆ. ಸುಮಾರು 52 ಕಾಲುವೆಗಳ ನೀರು ನೇರವಾಗಿ ತಾಜ್‍ಮಹಲ್ ಹಿಂದೆ ಹರಿಯುವ ಯಮುನ ನದಿ ಸೇರುವುದರಿಂದ ಕೀಟಗಳನ್ನು ನಿಯಂತ್ರಿಸಲೆಂದು ನದಿ ನೀರಿಗೆ ಬಿಡಲಾಗಿದ್ದ ಮೀನುಗಳೂ ಸಾಯುತ್ತಿವೆ ಎಂದವರು ಹೇಳಿದ್ದಾರೆ.

Comments are closed.