ಮನೋರಂಜನೆ

ಕ್ಯಾಮೆರಾ ಎದುರೇ ಪತಿಗೆ ಲಿಪ್ ಲಾಕ್ ಮಾಡಿದ ಸನ್ನಿ

Pinterest LinkedIn Tumblr

sunny

ಮುಂಬೈ: ಶುಕ್ರವಾರ 35ನೇ ವರ್ಷಕ್ಕೆ ಕಾಲಿಟ್ಟಿರುವ ಮಾಜಿ ನೀಲಿ ತಾರೆ, ಪಡ್ಡೆಗಳ ಸ್ವಪ್ನ ಸುಂದರಿ ಸನ್ನಿ ಲಿಯೋನ್ ತನ್ನ ಹುಟ್ಟು ಹಬ್ಬದ ದಿನವೇ ಕ್ಯಾಮೆರಾ ಮುಂದೆ ಪತಿ ಡ್ಯಾನಿಯಲ್ ವೆಬ್ಬರ್ ಜೊತೆ ಲಿಪ್ ಲಾಕ್ ಮಾಡುವ ಮೂಲಕ ತಾನು ತೆರೆಯ ಮೇಲೆ ಕಿಸ್ ಮಾಡಲು ರೆಡಿ ಎಂದು ಹೇಳಿದ್ದಾಳೆ.

ಇತ್ತೀಚಿಗೆ ಸನ್ನಿ ಇನ್ನೂ ಮುಂದೆ ಚಿತ್ರಗಳಲ್ಲಿ ಲಿಪ್ ಲಾಕ್ ಸೀನ್ ಗಳಲ್ಲಿ ಕಾಣಿಸಿಕೊಳ್ಳಲ್ಲ ಎಂಬ ಮಾತುಗಳು ಬಾಲಿವುಡ್ ಗಲ್ಲಿಯಲ್ಲಿ ಹರಿದಾಡಿದ್ದವು. ಅದರೆ ಆ ಎಲ್ಲಾ ಗಾಳಿ ಸುದ್ದಿಗಳಿಗೆ ಸ್ವತಃ ಸನ್ನಿ ಈಗ ಬ್ರೇಕ್ ಹಾಕಿದ್ದಾರೆ.

ಹೌದು, ತಾನು ಲಿಪ್ ಲಾಕ್ ಸೀನ್ ಮಾಡೋಕೆ ರೆಡಿ ಇದ್ದೀನಿ ಅಂತಾ ತಮ್ಮ ಹುಟ್ಟು ಹಬ್ಬದ ದಿನವೇ ಗಂಡನೊಂದಿಗೆ ಲಿಪ್ ಲಾಕ್ ಮಾಡಿರುವ ಸನ್ನಿ, ಆ ಫೋಟೋವನ್ನು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅಲ್ಲದೇ ‘ನಾನು ಕ್ಯಾಮಾರಾ ಮುಂದೆ ಕಿಸ್ ಮಾಡಲ್ಲಾಂತ ಯಾರು ಹೇಳಿದ್ದು? ಎಂದು ಪ್ರಶ್ನಿಸಿದ್ದಾಳೆ.

Write A Comment