ರಾಷ್ಟ್ರೀಯ

ಯುಪಿಎಸ್‌ಸಿ 2015ರ ಫಲಿತಾಂಶ: ದೆಹಲಿ ಯುವತಿ ಪ್ರಥಮ

Pinterest LinkedIn Tumblr

rdrn1lx3ನವದೆಹಲಿ(ಪಿಟಿಐ): ಕೇಂದ್ರ ಲೋಕ ಸೇವಾ ಆಯೋಗ(ಯುಪಿಎಸ್‌ಸಿ) ನಡೆಸಿದ 2015ರ ಪರೀಕ್ಷೆ ಫಲಿತಾಂಶವನ್ನು ಮಂಗಳವಾರ ಪ್ರಕಟಿಸಿದ್ದು, ದೆಹಲಿಯ ಯುವತಿ ಟೀನಾ ಧಾಬಿ ಅವರು ಪ್ರಥಮ, ಜಮ್ಮ ಮತ್ತು ಕಾಶ್ಮಿರದ ಅತ್ರಾ ಅಮೀರ್ ಉಲ್ ಶಫಿ ಖಾನ್ ಅವರು ದ್ವಿತೀಯ ಸ್ಥಾನ ಗಳಿಸಿದ್ದಾರೆ.
ದೆಹಲಿ ಮೂಲಕದ, ಭಾರತೀಯ ಕಂದಾಯ ಇಲಾಖೆ ಅಧಿಕಾರಿ ಜಸ್ಮೀತ್ ಸಿಂಗ್ ಅವರು ಮೂರನೇ ಸ್ಥಾನ ಪಡೆದಿದ್ದಾರೆ.
ಪ್ರಥಮ ಶ್ರೇಣಿಯಲ್ಲಿರುವ 22 ವರ್ಷದ ಟೀನಾ ಧಾಬಿ ಅವರು ಇಲ್ಲಿನ ಶ್ರೀರಾಮ ಕಾಲೇಜಿನ ಪದವೀಧರೆ. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿರುವ ಅವರು, ‘ಇದು ನಿಜಕ್ಕೂ ನನಗೆ ಹೆಮ್ಮೆಯ ವಿಷಯವಾಗಿದೆ’ ಎಂದು ಪ್ರತಿಕ್ರಿಯಸಿದ್ದಾರೆ.
ದಕ್ಷಿಣ ಕಾಶ್ಮೀರದ ಅನಂತನಾಗ್‌ನ 23 ವರ್ಷದ ಅತ್ರಾ ಅವರು ಎರಡನೇ ಪ್ರಯತ್ನದಲ್ಲಿ ಎರಡನೇ ಸ್ಥಾನ ಗಳಿಸಿದ್ದಾರೆ. 2014ರಲ್ಲಿ ಪ್ರಥಮ ಪ್ರಯತ್ನ ನಡೆಸಿರುವ ಅತ್ರಾ ಅವರು ಭಾರತೀಯ ರೈಲ್ವೆ ಸಂಚಾರ ಸೇವೆ(ಐಆರ್‌ಟಿಎಸ್‌)ಯಲ್ಲಿದ್ದು, ಪ್ರಸ್ತುತ ಲಕ್ನೊದ ಭಾರತೀಯ ರೈಲ್ವೆ ಇನ್‌ಸ್ಟಿಟ್ಯೂಟ್‌ ಆಫ್ ಟ್ರಾನ್ಸ್ಪೋರ್ಟ್‌ ಮ್ಯಾನೇಜ್ಮೆಂಟ್ ನಲ್ಲಿ ಉನ್ನತ ತರಬೇತಿ ಪಡೆಯುತ್ತಿದ್ದಾರೆ. ‘ಕನಸು ನನಸಾಗಲಿದೆ. ಜನರಿಗಾಗಿ ಸೇವೆ ಸಲ್ಲಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.
ಸಾಮಾನ್ಯ ವರ್ಗದ 499 ಅಭ್ಯರ್ಥಿಗಳು, ಇತರ ವರ್ಗದ 314, ಪರಿಶಿಷ್ಟ ಜಾತಿಯ 176, ಪರಿಶಿಷ್ಟ ಪಂಗಡದ 89 ಸೇರಿದಂತೆ 1,078 ಅಭ್ಯರ್ಥಿಗಳನ್ನು ಸರ್ಕಾರದ ವಿವಿಧ ಸೇವೆಗಳಿಗೆ ನೇಮಕ ಮಾಡಲು ಶಿಫಾರಸು ಮಾಡಿರುವುದಾಗಿ ಯುಪಿಎಸ್‌ಸಿ ತಿಳಿಸಿದೆ. 172 ಅಭ್ಯರ್ಥಿಗಳು ‘ವೇಟಿಂಗ್‌ ಲಿಸ್ಟ್’ನಲ್ಲಿದ್ದಾರೆ.

Write A Comment